ಕಲಬುರಗಿ: ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಹಿನ್ನಲೆ ಓಮಿನಿ ಕಾರೊಂದು ಧಗದಗನೇ ಹೊತ್ತಿ ಉರಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಬಳಿ ಘಟನೆ ನಡೆದಿದ್ದು ಕಾರು ಯಾದಗಿರಿಯಿಂದ ಕಲಬುರಗಿ ಕಡೆ ಬರ್ತಿತ್ತು ಎನ್ನಲಾಗಿದೆ.
ಅವಘಡದಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಸ್ಥಳಕ್ಕೆ ವಾಡಿ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..