ಬೆಂಗಳೂರು:- ಪ್ರೀತಿಸಿದ ಯುವತಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಪ್ರೀತಿಸಿದ ಯುವತಿಗಾಗಿ ತಂದೆ ತಾಯಿಗೆ ಬೆದರಿಕೆ ಹಾಕಿದ ರೌಡಿಯ ಲವ್ ಸ್ಟೋರಿ ಇದು. ಹೌದು, ಪುಂಡನೌರ್ವ ಪ್ರೀತಿಸಿದ ಯುವತಿ ಕಾರಿಗೆ ಬೆಂಕಿ ಹಚ್ಚಿದ್ದ. ಓಂ ಸಿನಿಮಾ ಸ್ಟೈಲ್ ನಲ್ಲಿ ಕಾರಿಗೆ ಆರೋಪಿ ಸ್ಟಾರ್ ರಾಹುಲ್ ಎಂಬಾತ ಬೆಂಕಿ ಹಚ್ಚಿದ್ದ. ತನ್ನನ್ನು ಬಿಟ್ಟರೇ ಬೇರೆ ಯಾರನ್ನೂ ಮದುವೆಯಾಗದಂತೆ ಎಚ್ಚರಿಕೆಯ ಬೆಂಕಿ ಹಾಕಿದ್ದ. ಯುವತಿ ಪೊಷಕರಿಗೆ ಬೆದರಿಕೆ ಹಾಕುವ ನಿಟ್ಟಿನಲ್ಲಿ ಈ ರೌಡಿಶೀಟರ್ ಬೆಂಕಿ ಹಚ್ಚಿದ್ದ ಎಂದು ತಿಳಿದು ಬಂದಿದೆ.
ಹನುಮಂತನಗರ ಪೊಲೀಸ್ ಠಾಣಾ ರೌಡಿಶೀಟರ್ ಆಗಿರೋ ಸ್ಟಾರ್ ರಾಹಯಲ್, ಈತನ ಮೇಲೆ ಕೊಲೆ ಯತ್ನ, ದರೋಡೆ, ರಾಬರಿ ಸೇರಿದಂತೆ 18 ಕೇಸ್ ಗಳಿವೆ. ಕುಖ್ಯಾತ ರೌಡಿ ಕುಳ್ಳು ರಿಜ್ವಾನ್ ಶಿಷ್ಯ ಆಗಿದ್ದಾನೆ. ಈ ಹಿಂದೆ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದರು. ಯುವತಿ ಜೊತೆ ರಾಹುಲ್ 9 ವರ್ಷಗಳ ಪ್ರೀತಿ ಬಲೆಯಿದ್ದ . ಈತ ರೌಡಿಶೀಟರ್ ಅಂತಾ ಗೊತ್ತಿದ್ದರೂ ಯುವತಿ ಪ್ರೀತಿಸಿದ್ದಳು.
ಕಳೆದ ಕೆಲ ತಿಂಗಳುಗಳಿಂದ ಯುವತಿ, ಪ್ರೀತಿ ನಿರಾಕರಿಸಿದ್ದಳು. ಈ ಹಿನ್ನೆಲೆ ತನ್ನ ಸಹಚರರನ್ನ ಕಟ್ಟಿಕೊಂಡು ಬಂದಿದ್ದ ಸ್ಟಾರ್ ರಾಹುಲ್, ಈ ಕೃತ್ಯ ಎಸಗಿದ್ದಾನೆ. ಆಕೆಯ ಕುಟುಂಬಸ್ತರಿಗೆ ಭಯ ಬೀಳಿಸುವ ಉದ್ದೇಶದಿಂದ ಬೆಂಕಿ ಹಚ್ಚಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಲೆ ಪೊಲೀಸರು ಬಲೆ ಬೀಸಿದ್ದಾರೆ.