ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಒಲೀ ಪೋಪ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅವರು 278 ಎಸೆತಗಳಲ್ಲಿ 196 ರನ್ಗಳನ್ನು ಗಳಿಸಿದ್ದಾರೆ.
163 ರನ್ಗಳಿಗೆ 5 ವಿಕೆಟ್ ನಷ್ಟ ಅನುಭವಿಸಿದ್ದ ಇಂಗ್ಲೆಂಡ್ಗೆ ಆಸರೆಯಾಗಿ ನಿಂತ ಪೋಪ್ 3ನೇ ದಿನದಾಟದಲ್ಲಿ 154 ಎಸೆತಗಳಲ್ಲಿ ಶತಕ ಬಾರಿಸಿದ್ದರು. ನಾಲ್ಕನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 196 ರನ್ಗಳಿಸಿ ವಿಕೆಟ್ ಒಪ್ಪಿಸಿದ ಅವರು, ಕೇವಲ 4 ರನ್ಗಳಿಂದ ದ್ವಿಶತಕ ವಂಚಿತರಾದರು.
Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.
ಇನ್ನೂ ಈ ಮೊದಲು ಭಾರತದ ನೆಲದಲ್ಲಿ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಅಲಿಸ್ಟರ್ ಕುಕ್ ಹೆಸರಿನಲ್ಲಿದ್ದ ದಾಖಲೆಯನ್ನು ಒಲೀ ಪೋಪ್ ಮುರಿದಿದ್ದಾರೆ. 2012 ರಲ್ಲಿ ಅಹಮದಾಬಾದ್ನಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಕುಕ್ 176 ರನ್ ಬಾರಿಸಿದ್ದರು. ಇದು ದಾಖಲೆಯಾಗಿತ್ತು. ಇದೀಗ ಪೋಪ್ ಆ ದಾಖಲೆಯನ್ನು ತಮ್ಮ ಪಾಲಾಗಿಸಿಕೊಂಡಿದ್ದಾರೆ.
ಆತಿಥೇಯ ಭಾರತ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ದಾಖಲೆಯನ್ನು ಪೋಪ್ ಇದೀಗ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕ್ರಮವಾಗಿ ಆ್ಯಂಡಿ ಫ್ಲವರ್ (232), ಬ್ರೆಂಡನ್ ಮೆಕಲಂ (225) ಹಾಗೂ ಗ್ಯಾರಿ ಸೋಬರ್ಸ್ (198) ಇದ್ದಾರೆ. ಇದೀಗ 196 ರನ್ ಗಳಿಸುವ ಮೂಲಕ ಒಲೀ ಪೋಪ್ ನಾಲ್ಕನೆಯವರಾಗಿ ಸೇರ್ಪಡೆಯಾಗಿದ್ದಾರೆ.