ಆಲಿವ್ ಎಣ್ಣೆ ಆರೋಗ್ಯಕರ ಕೊಬ್ಬನ್ನು ಒಳಗೊಂಡಿದೆ. ವಿವಿಧ ಆರೋಗ್ಯಕರ ಪ್ರಯೋಜನಗಳನ್ನು ಒಳಗೊಂಡಿರುವ ಈ ಎಣ್ಣೆಯನ್ನು ನೈಸರ್ಗಿಕವಾಗಿ ದೊರೆಯುವ ಅತ್ಯುತ್ತಮ ಎಣ್ಣೆ ಎಂದು ಪರಿಗಣಿಸಲಾಗುವುದು.
ಆಲಿವ್ ಎಣ್ಣೆ ಪೋಷಕಾಂಶಗಳಿಂದ ಕೂಡಿರುವ ಅದ್ಭುತ ಎಣ್ಣೆ. ಇದರಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿವೆ. ಇದು ಆರೋಗ್ಯಕ್ಕೆ ಉತ್ತಮವಾದುದ್ದು. ಇತರ ಎಣ್ಣೆಗಳಿಗೆ ಹೋಲಿಸಿದರೆ ಈ ಎಣ್ಣೆ ಆರೋಗ್ಯಕ್ಕೆ ಅತ್ಯುತ್ತಮ ಪೋಷಣೆ ಹಾಗೂ ಆರೈಕೆಯನ್ನು ಮಾಡುವುದು. ಅನಗತ್ಯವಾದ ಕೊಬ್ಬುಗಳನ್ನು ಕರಗಿಸಲು ಸಹ ಸಹಾಯ ಮಾಡುವುದು. ಸಮೃದ್ಧವಾದ ಪ್ರೋಟೀನ್ಗಳಿಂದ ಕೂಡಿರುವ ಈ ಎಣ್ಣೆ ಆರೋಗ್ಯಕ್ಕೆ ಉತ್ತಮ ಪೋಷಣೆಯನ್ನು ನೀಡುವುದರ ಜೊತಗೆ ಸಾಕಷ್ಟು ಅನಾರೋಗ್ಯಗಳನ್ನು ಕಡಿಮೆ ಮಾಡುತ್ತದೆ.
ಒಂದು ಟೀ ಚಮಚದಲ್ಲಿ 13.5 ಗ್ರಾಂ. ಆಲಿವ್ ಎಣ್ಣೆ ಇರುತ್ತದೆ. ಅದರಲ್ಲಿ 119 ಕ್ಯಾಲೋರಿಗಳು, 13.5 ಗ್ರಾಂ ಕೊಬ್ಬು, 1.86 ಗ್ರಾಂ ಸ್ಯಾಚುರೇಟ್, ವಿಟಮಿನ್ ಇ 1.9 ಮಿಲಿಗ್ರಾಂ, ವಿಟಮಿನ್ ಕೆ 8.13 ಮೈಕ್ರೋಗ್ರಾಂ, ಆಂಟಿ ಆಕ್ಸಿಡೆಂಟ್ಗಳು, ಉರಿಯೂತದ ಲಕ್ಷಣಗಳು, ಕ್ಯಾಲ್ಸಿಯಮ್, ಟ್ರೇಸ್ ಖನಿಜಗಳಾದ ಪೊಟ್ಯಾಸಿಯಮ್, ಪಾಲಿಫಿನಾಲ್ಸ್, ಸ್ಕ್ವಾಲೀನ್ ಮತ್ತು ಟೆರ್ಪೆನಿಕ್ ಆಮ್ಲಗಳಿಂದ ಕೂಡಿರುತ್ತದೆ. ಇವು ಉತ್ತಮ ಆರೋಗ್ಯಕ್ಕೆ ಹಾಗೂ ಸೌಂದರ್ಯ ವರ್ಧನೆಗೆ ಸಹಾಯವಾಗುತ್ತವೆ.
ದೈನಂದಿನ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬನ್ನು ಸೇರಿಸುವುದು ಅತ್ಯಗತ್ಯ. ಅವು ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತವೆ. ಆಹಾರ ಮಾರ್ಗ ಸೂಚಿಗಳ ಪ್ರಕಾರ ಪಾಲಿಸಾಚುರೇಟೆಡ್ ಕೊಬ್ಬಿನಾಮ್ಲ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಶೇ. 20-35ರಷ್ಟು ಪಡೆಯಬಹುದು. ಈ ಎರಡು ಗುಣಗಳು ಆರೋಗ್ಯಕ್ಕೆ ಅಗತ್ಯವಾದ ಕೊಬ್ಬನ್ನು ಒದಗಿಸುತ್ತವೆ.
ಆಲಿವ್ ಎಣ್ಣೆಯನ್ನು ನೇರವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಉತ್ತಮ ಪೋಷಣೆ ನೀಡುವುದು. ಮಲಬದ್ಧತೆಗೆಯ ನಿವಾರಣೆಗೆ ಆಲಿವ್ ಎಣ್ಣೆ ಅತ್ಯುತ್ತಮ ನೈಸರ್ಗಿಕ ಚಿಕಿತ್ಸಕವಾಗುವುದು. ಇದು ಮಲವನ್ನು ಮೃದುಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಹಾಗಾಗಿ ಇದನ್ನು ದೈನಂದಿನ ಬಳಕೆಯಲ್ಲಿ ಬಳಸಲು ಸಲಹೆ ನೀಡಲಾಗುವುದು.
ಆಲಿವ್ ಎಣ್ಣೆಯನ್ನು ನೇರವಾಗಿ ಸೇವಿಸುವುದರಿಂದ ಅನಗತ್ಯವಾದ ಕೊಬ್ಬು ಮತ್ತು ತೂಕವನ್ನು ಇಳಿಸಬಹುದು. ಇದು ಒಟ್ಟಾರೆ ಕೊಬ್ಬಿನಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಕೆಲವು ತಜ್ಞರು ಅಭಿಪ್ರಾಯಿಸುವ ಪ್ರಕಾರ ಆಲಿವ್ ಎಣ್ಣೆಯನ್ನು ಆಹಾರ ಪದಾರ್ಥಗಳಲ್ಲಿ ಸೇರಿಸುವುದಕ್ಕಿಂತ ನೇರವಾಗಿ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.
ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು, ಮೂಳೆಯ ಸಾಂದ್ರತೆಯನ್ನು ಸುಧಾರಿಸುವುದು, ಕೂದಲು ಮತ್ತು ಚರ್ಮವನ್ನು ಪೋಷಿಸುವುದು, ಉರಿಯೂತವನ್ನು ಕಡಿಮೆ ಮಾಡುವುದು, ನೋವು ನಿವಾರಕವಾಗಿ ಕೆಲಸ ಮಾಡುವುದು ಸೇರಿದಂತೆ ಆರೋಗ್ಯಕ್ಕೆ ಸಾಕಷ್ಟು ಉತ್ತಮ ಪೋಷಣೆ ನೀಡುವುದು.