ಅಯ್ಯೋ ಶಿವ ಇದು ಇಲಿಗಳ ಕೋಟೆ. ರಾತ್ರೋ ರಾತ್ರಿ ಸತ್ತ ವ್ಯಕ್ತಿಯ ಕಣ್ಣು ಮಾಯ ಆಗುತ್ತೆ ಅಂದ್ರೆ ನೀವೇ ಯೋಚನೆ ಮಾಡಿ. ಅಂಥದ್ದು ಏನಿದೆ ಅಂತ.
Winter Tips: ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಮರ್ರೆ ನಾವು ಹೇಳ್ತಿರೋದು ನಿಮಗೆ ಸ್ವಲ್ಪ ಕನ್ಫ್ಯೂಸ್ ಆಗ್ಬಹುದು ಇದು ಸತ್ಯ. ಎಸ್, ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯೊಬ್ಬನ ಕಣ್ಣು ನಾಪತ್ತೆಯಾಗಿದೆ. ಇದಕ್ಕೆಲ್ಲಾ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದರೆ, ವೈದ್ಯರು ಮಾತ್ರ ಇದಕ್ಕೆಲ್ಲಾ ಇಲಿಗಳು ಕಾರಣ ಎಂದು ಹೇಳಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಬಿಹಾರದ ರಾಜಧಾನಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯೊಬ್ಬನ ಕಣ್ಣುಗಳು ನಾಪತ್ತೆಯಾದ ಆಘಾತಕಾರಿ ಘಟನೆಯೊಂದು ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ
ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿ ಮೃತ ವ್ಯಕ್ತಿಯ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ವಾಸ್ತವವಾಗಿ, ನಳಂದದಲ್ಲಿ ನಡೆದ ಹಿಂಸಾಚಾರದಲ್ಲಿ ಫುಂತೂಶ್ ಎಂಬ ವ್ಯಕ್ತಿಗೆ ಗುಂಡೇಟು ತಗುಲಿ ಆತನನ್ನು ನವೆಂಬರ್ 14 ರಂದು NMCH ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಆತನನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15 ರಂದು ಫಂತೂಶ್ ಮೃತಪಟ್ಟನು. ರಾತ್ರಿಯಾಗಿದ್ದ ಕಾರಣ ಮರಣೋತ್ತರ ಪರೀಕ್ಷೆಯನ್ನು ನಡೆಸದೆ ವೈದ್ಯರು ಮೃತದೇಹವನ್ನು ಐಸಿಯುನಲ್ಲೇ ಇರಿಸಿದ್ದರು. ಆದರೆ ಮರುದಿನ ಬೆಳಗ್ಗೆ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಮೃತ ಫಂತೂಶ್ನ ಎಡಗಣ್ಣು ನಾಪತ್ತೆಯಾಗಿತ್ತು. ಮೃತ ದೇಹ ಇರಿಸಿದ್ದ ಸ್ಟ್ರೆಚರ್ ಮೇಲೆ ಸರ್ಜಿಕಲ್ ಬ್ಲೇಡ್ ಇರುವುದನ್ನು ಮೃತನ ಕುಟುಂಬಸ್ಥರು ಗಮನಿಸಿದ್ದು, ವೈದ್ಯರೇ ಸಾವಿನ ನಂತರ ಫಂತೂಶ್ನ ಕಣ್ಣನ್ನು ತೆಗೆದಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಯನ್ನು ಮಾಡಿದ್ದಾರೆ.
ಆದರೆ ವೈದ್ಯರು ಮಾತ್ರ ಬಹುಶಃ ಇಲಿಗಳು ಕಣ್ಣನ್ನು ಕಚ್ಚಿರಬಹುದು ಎಂದು ಇಲಿಗಳ ಮೇಲೆ ಆರೋಪಿಸಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರ ಪ್ರತಿಭಟನೆ ಗಂಭೀರ ಸ್ವರೂಪಕ್ಕೆ ತಿರುಗುತ್ತಿದ್ದಂತೆ, ಎನ್ ಎಂಸಿಎಚ್ ಆಸ್ಪತ್ರೆ ಅಧೀಕ್ಷಕ ಡಾ.ವಿನೋದ್ ಕುಮಾರ್ ಅವರು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.