ವಿಶ್ವಾದ್ಯಂತ ಇರುವ ಹಲವು ದೇಶಗಳಲ್ಲಿ ವಿಭಿನ್ನ, ವಿಚಿತ್ರ ಸಂಪ್ರದಾಯಗಳು ಇಂದಿಗೂ ರೂಢಿಯಲ್ಲಿವೆ. ಹುಟ್ಟಿನಿಂದ ಸಾವಿನವರೆಗೆ ಕೆಲವು ವಿಶೇಷ ಸಂಪ್ರದಾಯಗಳಿರುತ್ತವೆ. ಕೆಲವು ಸಂಪ್ರದಾಯಗಳ ಆಚರಣೆಗಳು ಮನಸ್ಸಿಗೆ ಸಂತೋಷ ಕೊಟ್ಟರೆ, ಇನ್ನೂ ಕೆಲವು ಆಚರಣೆಗಳು ಮನಸ್ಸಿಗೆ ತುಂಬಾ ಘಾಸಿ ಮಾಡುತ್ತವೆ. ಅನೇಕ ಸ್ಥಳಗಳಲ್ಲಿ ಈ ಸಂಪ್ರದಾಯಗಳು ಅತ್ಯಂತ ಕ್ರೂರ ಮತ್ತು ನೋವಿನಿಂದ ಕೂಡಿರುತ್ತವೆ. ಬುಡಕಟ್ಟು ಜನಾಂಗ ಸಂಪ್ರದಾಯದ ಬಗ್ಗೆ ನೀವು ತಿಳಿದರೆ ಖಂಡಿತ ಬೆಚ್ಚಿಬೀಳುವುದಂತೂ ಖಚಿತ. ಈ ಸಂಪ್ರದಾಯ ಅತ್ಯಂತ ಅಮಾನವೀಯ ಎನಿಸುತ್ತದೆ.
ಬ್ಯಾನ್ ಆಗುತ್ತಾ ಹಸಿರು ಬಟಾಣಿ!? ಲ್ಯಾಬ್ ವರದಿಯಲ್ಲಿ ಸ್ಪೋಟಕ ಅಂಶ ಬೆಳಕಿಗೆ!
ಪ್ರಪಂಚದಾದ್ಯಂತ ಇರುವ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿವೆ. ಅದರಲ್ಲಿ ಇನ್ನೂ ಕೆಲವರು ನಾಗರಿಕ ಸಮಾಜದಿಂದ ದೂರದಲ್ಲಿರುವ ದಟ್ಟ ಕಾಡುಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಾವಿರಾರು ವರ್ಷಗಳಷ್ಟು ಹಳೆಯದಾದ ಸಂಪ್ರದಾಯಗಳನ್ನೇ ಅನುಸರಿಸುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ವಾಸಿಸುವ ಸ್ಥಳಗಳು ಸಂಪೂರ್ಣವಾಗಿ ಅವರದೇ ಆಗಿವೆ. ಜೊತೆಗೆ ಆಯಾ ದೇಶದ ಸರ್ಕಾರಗಳು ಈ ಬುಡಕಟ್ಟು ಜನಾಂಗಗಳನ್ನು ಅಳಿವಿನಿಂದ ರಕ್ಷಿಸಲು ಪ್ರಯತ್ನಿಸುತ್ತಲೇ ಇರುತ್ತವೆ. ಅದರಂತೆ ಒಂದು ಬುಡಕಟ್ಟು ಜನಾಂಗದವರು ಸ್ನಾನ ಮಾಡದೆ ಬದುಕುತ್ತಾರೆ. ಹೌದು, ಸ್ನಾನ ಮಾಡದೇ ಬದುಕುತ್ತಾರೆ..!
ಇದು ಯಾವ ಬುಡಕಟ್ಟು ಮತ್ತು ಅದು ಎಲ್ಲಿ ಕಂಡುಬರುತ್ತದೆ ಎಂದು ಇಲ್ಲಿದೆ ಮಾಹಿತಿ. ಅಷ್ಟಕ್ಕೂ, ಈ ಜನರು ಸ್ನಾನ ಮಾಡದೆ ತಮ್ಮ ದೇಹವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ? ಎಂದರೆ ಅದಕ್ಕೂ ಇಲ್ಲಿದೆ ಮಾಹಿತಿ. ಹೌದು ಈ ಸಮುದಾಯದ ಹೆಸರು ಹಿಂಬಾ. ಇವರು ಶತಮಾನಗಳಿಂದ ಆಫ್ರಿಕಾ ಖಂಡದ ಉತ್ತರ ನಮೀಬಿಯಾದಲ್ಲಿ ವಾಸಿಸುತ್ತಿದ್ದಾರೆ. ಇದು ಅರೆ ಅಲೆಮಾರಿ ಬುಡಕಟ್ಟು.
ಆದರಂತೆ ಹಿಂಬಾ ಬುಡಕಟ್ಟು ಜನಾಂಗದವರು ತಮ್ಮ ಜೀವನದುದ್ದಕ್ಕೂ ಸ್ನಾನ ಮಾಡುವುದಿಲ್ಲ. ಈ ಬುಡಕಟ್ಟಿನ ಜನರಿಗೆ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ. ಅದರಲ್ಲೂ ಮಹಿಳೆಯರಿಗೆ! ಹೌದು, ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದುದ್ದಕ್ಕೂ ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ. ಆದರೂ ಈ ಬುಡಕಟ್ಟಿನ ಮಹಿಳೆಯರನ್ನು ಆಫ್ರಿಕಾದಲ್ಲಿ ಅತ್ಯಂತ ಸುಂದರವೆಂದು ಪರಿಗಣಿಸಲಾಗಿದೆ.
ಹಿಂಬಾ ಜನರು ಮುಖ್ಯವಾಗಿ ಪಶುಪಾಲಕರು. ದನಗಳು, ಮೇಕೆಗಳು ಮತ್ತು ಕೆಲವೊಮ್ಮೆ ಕುರಿಗಳನ್ನು ಸಾಕುತ್ತಾರೆ. ದನಗಳು ಅವರ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ ಮತ್ತು ಸಂಪತ್ತಿನ ಸಂಕೇತವಾಗಿವೆ. ಅವರು ಗುಡಿಸಲುಗಳಲ್ಲಿ ವಾಸಿಸುತ್ತಾರೆ, ಇವು ಮಣ್ಣು ಮತ್ತು ಗೊಂಡಸಲಿನಿಂದ ಮಾಡಲ್ಪಟ್ಟಿರುತ್ತವೆ. ಈ ಗುಡಿಸಲುಗಳನ್ನು ಸಾಮಾನ್ಯವಾಗಿ ಗುಂಡಿಗೆಯ ಆಕಾರದಲ್ಲಿ ನಿರ್ಮಿಸಲಾಗುತ್ತದೆ.
ಹಿಂಬಾ ಜನರು ತಮ್ಮ ವಿಶಿಷ್ಟವಾದ ಕೆಂಪು ಕಾವಿಮಣ್ಣಿನ ದೇಹದ ಬಣ್ಣ ಮತ್ತು ವಿಶಿಷ್ಟ ಆಭರಣಗಳಿಗೆ ಹಾಗೂ ಅವರ ಆಳವಾದ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಹಿಂಬಾ ಜನರು ತಮ್ಮ ಪರಿಸರದೊಂದಿಗೆ ವಿಶಿಷ್ಟ ಸಂಬಂಧವನ್ನು ಹೊಂದಿದ್ದಾರೆ ಮತ್ತು ಕೃಷಿ, ಪಶುಸಂಗೋಪನೆ ಮತ್ತು ಬೇಟೆಯಲ್ಲಿ ಪರಿಣತಿ ಹೊಂದಿದ್ದಾರೆ. ಈ ಬುಡಕಟ್ಟಿನ ಒಟ್ಟು ಜನಸಂಖ್ಯೆ ಸುಮಾರು 50,000. ಇನ್ನು ಈ ಸಮುದಾಯದ ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಹೊಲಗಳಲ್ಲಿಯೇ ಕಳೆಯುತ್ತಾರೆ.
ಈಗ ಹಿಂಬಾ ಬುಡಕಟ್ಟಿನ ಜನರು ಸ್ನಾನ ಮಾಡದಿದ್ದರೆ ಅವರು ತಮ್ಮನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾಸ್ತವವಾಗಿ, ಈ ಬುಡಕಟ್ಟಿನ ಜನರು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರಲು ಹೊಗೆ ಸ್ನಾನ ಮಾಡುತ್ತಾರೆ. ಇನ್ನು ಮಹಿಳೆಯರು ತಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿಶೇಷ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಅವಳು ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸಿ, ಆ ಹಬೆಯಿಂದ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುತ್ತಾಳೆ. ಈ ಕಾರಣದಿಂದಾಗಿ, ಅವರ ದೇಹವು ವಾಸನೆ ಮಾಡುವುದಿಲ್ಲ. ಇಷ್ಟೇ ಅಲ್ಲ, ತನ್ನ ಚರ್ಮವನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ವಿಶೇಷ ಲೋಷನ್ ಕೂಡ ಹಚ್ಚಿಕೊಳ್ಳುತ್ತಾಳೆ. ಈ ಲೋಷನ್ ಅನ್ನು ಪ್ರಾಣಿಗಳ ಕೊಬ್ಬು ಮತ್ತು ವಿಶೇಷ ಖನಿಜ ಹೆಮಟೈಟ್ ನಿಂದ ತಯಾರಿಸಲಾಗುತ್ತದೆ.