ಫೇಸ್ಬುಕ್ ಲಾಯರ್’ ಎಂದು ಟೀಕಾಕಾರರಿಂದ ಕರೆಸಿಕೊಳ್ಳುವ, ತಮ್ಮ ವಕೀಲಿಕೆಗಿಂತಲೂ ಸಾಮಾಜಿಕ ಜಾಲತಾಣದಿಂದ ಭಾರಿ ಹೆಸರು ಮಾಡಿರುವ ವಕೀಲ ಜಗದೀಶ್ ಅವರನ್ನು ಬಿಗ್ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಕಳಿಸಲಾಗುತ್ತಿದೆ. ಲಾಯರ್ ಜಗದೀಶ್ರದ್ದು ವರ್ಣಮಯ ವ್ಯಕ್ತಿತ್ವ ಮಾತ್ರವಲ್ಲ, ಅವರದ್ದು ಬಹಳ ವರ್ಣಮಯ ವೈಯಕ್ತಿಕ ಜೀವನ ಸಹ. ಬಿಗ್ಬಾಸ್ಗೆ ಹೇಳಿ ಮಾಡಿಸಿದ ವ್ಯಕ್ತಿ ಜಗದೀಶ್.
Muda Scam: CM ಸಿದ್ದರಾಮಯ್ಯಗೆ ಸಂಕಷ್ಟ; ಇಡಿಗೂ ದೂರು ನೀಡಿದ ಸ್ನೇಹಮಯಿ ಕೃಷ್ಣ!
ಜಗದೀಶ್ರದ್ದು ಕೊಡಿಗೇಹಳ್ಳಿ, ಒಕ್ಕಲಿಗ ಕುಟುಂಬದ ಜಗದೀಶ್, ಅವರೇ ಹೇಳಿಕೊಂಡಿರುವಂತೆ ಅವರ ತಂದೆ ಶ್ರೀಮಂತರು, ಅವರು ವಾಸಿಸುವುದು ಭಾರಿ ದೊಡ್ಡ ಮನೆಯಲ್ಲಿ. ಅವರು ಯುವಕರಾಗಿದ್ದಾಗ ಅವರ ಮೇಲೆ ಪೊಲೀಸರು ಸುಳ್ಳು ಕೇಳು ದಾಖಲಿಸಿ ಅವರನ್ನು ರೌಡಿ ಶೀಟರ್ ಮಾಡಿ ಅವಮಾನ ಮಾಡಿದ್ದರಂತೆ. ದೌರ್ಜನ್ಯ ಮಾಡಿದರಂತೆ. ಅದೇ ಕಾರಣಕ್ಕೆ ಸ್ವಂತ ಪರಿಶ್ರಮದಿಂದ ಎಲ್ಎಲ್ಬಿ ಓದಿ ಅವರ ಕೇಸುಗಳನ್ನು ಅವರೇ ವಾದಿಸಿದರಂತೆ. ಆ ನಂತರ ಸಾಮಾಜಿಕ ಹೋರಾಟಕ್ಕೂ ಧುಮುಕಿದ ಅವರು ಮೊದಲು ಬೆಳಕಿಗೆ ಬಂದಿದ್ದು ಏರ್ಪೋರ್ಟ್ ಬಳಿಯ ಟೋಲ್ ಬಗ್ಗೆ ಅವರು ಮಾಡಿದ್ದ ವಿಡಿಯೋ ಮೂಲಕ.
ಆ ಬಳಿಕ ಪುನೀತ್ ಕೆರೆಹಳ್ಳಿ ವಿರುದ್ಧ ಅವರ ಸಾಮಾಜಿಕ ಜಾಲತಾಣದ ಹೋರಾಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರೂ ಸಹ ಪರಸ್ಪರರ ಬಗ್ಗೆ ಏಕವಚನದಲ್ಲಿ ಬೈದಾಡಿಕೊಂಡಿದ್ದರು. ಅದಾದ ಬಳಿಕ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಪ್ರಕರಣದಲ್ಲಿಯೂ ಸಹ ಜಗದೀಶ್ ಸುದ್ದಿಯಾಗಿದ್ದರು. ಸಂತ್ರಸ್ಥೆಯ ಪರವಾಗಿ ನಿಂತಿದ್ದ ಜಗದೀಶ್, ಸಂತ್ರಸ್ತೆಯನ್ನು ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಕರೆತರುವ ಕೆಲಸ ಮಾಡಿದ್ದರು.
ಅದಾದ ಬಳಿಕ ಜಾತಿ ನಿಂದನೆ ಪ್ರಕರಣದಲ್ಲಿ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ ಪ್ರಕರಣವೂ ಆಗಿತ್ತು. ಆ ಘಟನೆ ಬಳಿಕ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದ ಜಗದೀಶ್, ಇತ್ತೀಚೆಗೆ ದರ್ಶನ್ ವಿಚಾರ ನಡೆದ ಬಳಿಕ ಮತ್ತೆ ಪ್ರತ್ಯಕ್ಷವಾಗಿದ್ದರು. ದರ್ಶನ್ ಪರವಾಗಿ ಪ್ರತಿಭಟನೆ ಮಾಡೋಣ ಬನ್ನಿ ಎಂದು ಕರೆ ನೀಡಿದ್ದರು. ಮುನಿರತ್ನ ವಿರುದ್ಧವೂ ವಿಡಿಯೋ ಮಾಡಿದ್ದರು. ಮಾಜಿ ಸಿಎಂ ಒಬ್ಬರ ಅಕ್ರಮದ ದಾಖಲೆಗಳು ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿದ್ದರು.