ಬೆಂಗಳೂರು:– ನಗರದ ಮೈಸೂರು ರೋಡ್ ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಗುಂಡಿಗಳಿವೆ. ಇದರಿಂದ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಅಕ್ಕಪಕ್ಕದ ಏರಿಯಾಗಳ ಮೂಲಕ ತಮ್ಮ ಮನೆ ಮತ್ತು ಕಚೇರಿ ಸೇರುತ್ತಿದ್ದಾರೆ
Rain News: ಕರ್ನಾಟಕದ ಈ 15 ಜಿಲ್ಲೆಗಳಲ್ಲಿ ನಾಲ್ಕು ದಿನ ಧಾರಕಾರ ಮಳೆ!
ನಗರದಲ್ಲಿನ ಗುಂಡಿ ಮುಚ್ಚಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಅಂತ ಪಾಲಿಕೆ ಹೇಳ್ತಾ ಇದೆ. ಆದರೆ ನಗರದ ಪ್ರಮುಖ ರಸ್ತೆಗಳಲ್ಲಿಯೇ ಗುಂಡಿಗಳು ಬಾಯ್ತೆರೆದು ನಿಂತಿವೆ. ಬೆಂಗಳೂರು ಟು ಮೈಸೂರು ಸಂಪರ್ಕ ಕಲ್ಪಿಸುವ ಬಾಪೂಜಿ ನಗರದ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಳಿ ಇರುವ ಗುಂಡಿಯಿಂದ ದಿನನಿತ್ಯ ನಾಲ್ಕೈದು ಮಂದಿ ಬೀಳುವುದು ಸರ್ವೇ ಸಾಮಾನ್ಯ ಆಗಿದೆ. ಇನ್ನು ರಸ್ತೆಯಲ್ಲೇ ನೀರು ನಿಂತ ಪರಿಣಾಮ ಎಲ್ಲಿ ಗುಂಡಿಗಳು ಇವೆ ಅನ್ನೋದೇ ಜನರಿಗೆ ತಿಳಿಯುತ್ತಿಲ್ಲ. ಇಲ್ಲಿ ಪ್ರತಿದಿನ ನಾಲ್ಕೈದು ಜನರು ಬೀಳುತ್ತಾರೆ, ನಿನ್ನೆ ರಾತ್ರಿ ಮಳೆ ಬಂದಾಗ ಒಂದು ಆಟೋ ಪಲ್ಟಿ ಆಗಿತ್ತು ಎಂದು ಸ್ಥಳೀಯ ನಿವಾಸಿ ಶಂಕರ್ ಅವರು ತಿಳಿಸಿದರು
ಇನ್ನು ಈ ಪ್ರಮುಖ ರಸ್ತೆಯಲ್ಲಿ ಮುಕ್ಕಾಲು ಭಾಗ ಕಾಂಕ್ರಿಟ್ ಹಾಕಲಾಗಿದ್ದು, ಉಳಿದ ಕಾಲು ಭಾಗಕ್ಕೆ ಡಾಂಬರು ಹಾಕಲಾಗಿದೆ, ಅದನ್ನು ಸಹ ಜಲಮಂಡಳಿ ಅಗೆದು ಪೈಪ್ ಲೈನ್ ಕಾಮಗಾರಿ ಮಾಡಿದೆ. ಆದ್ರೆ ಸರಿಯಾಗಿ ಮುಚ್ಚಿ ಹೋಗಿಲ್ಲ, ಇತ್ತ ರೋಡ್ ನ ಸೈಡ್ ಗೆ ಬಂದರೆ ಜಾರಿ ಬೀಳುವ ಸಂಭವವೇ ಹೆಚ್ಚು. ಅಲ್ಲದೆ ಈ ರಸ್ತೆಯಲ್ಲಿ ಓಡಾಟ ಮಾಡುವುದೇ ಇತ್ತೀಚೆಗೆ ಸಾಹಸವಾಗಿ ಪರಿಣಮಿಸಿದೆ ಎಂದು ವಾಹನ ಸವಾರ ಸಿದ್ಧರಾಜು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.