ಕಲಬುರ್ಗಿ:- ಎಲೆಕ್ಟ್ರಾನಿಕ್ಸ್ ಐಟಂ ಇಡುವಂತಿಲ್ಲ ಮಂಗಲಸೂತ್ರ ಕಾಲುಂಗುರ ತೆಗೆಯುವಂತಿಲ್ಲ..ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಟ್ಟುನಿಟ್ಟಾಗಿ ಹೊರಡಿಸಿರುವ ಹೊಸ ಗೈಡ್ ಲೈನ್ಸ್..ಯಾವುದೇ ಅವಾಂತರ ಮರುಕಳಿಸದಂತೆ ಪರೀಕ್ಷಾ ಸಿಬ್ಬಂದಿಗಳು ಎಚ್ಚರವಹಿಸಬೇಕು ಅಂತ ಕಲಬುರಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೌದು ಇದೇ 17 ಮತ್ತು 18 ರಂದು ಎರಡು ದಿನಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ.. 14058 ನಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಹೀಗಾಗಿ ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿಗಳು KEA ಹೊರಡಿಸಿರುವ ನಿಯಮಾವಳಿಗಳನ್ನ ಪಾಲಿಸತಕ್ಕದ್ದು ಅಂತ ADC ರಾಯಪ್ಪ ಹುಣಸಿಗಿ ಸೂಚಿಸಿದ್ದಾರೆ.
ಇತ್ತೀಚಿಗೆ ನಡೆದ ಪರೀಕ್ಷೆ ವೇಳೆ ಮಂಗಲಸೂತ್ರ ಕಾಲುಂಗುರ ತೆಗೆಸಿ ಪರೀಕ್ಷೆ ಬರೆಸಿದ್ದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು..