ಕೊಲಂಬೊ: ಕೊನೆವರೆಗೂ ರೋಚಕತೆಯಿಂದ ಕೂಡಿದ್ದ ಭಾರತ-ಶ್ರೀಲಂಕಾ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಚೊಚ್ಚಲ ಪಂದ್ಯ ಟೈ ಆಗಿದೆ. ಗೆಲುವಿಗೆ ಬೇಕಿದ್ದ 1 ರನ್ ಗಳಿಸುವಲ್ಲಿ ಟೀಂ ಇಂಡಿಯಾ ವಿಫಲವಾಗಿ ಪಂದ್ಯವು ಟೈನಲ್ಲಿ ಅಂತ್ಯಕಂಡಿತು.
ಇಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು. 231 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 47.5 ಓವರ್ಗೆ 230 ರನ್ ಗಳಿಸಿ ಗೆಲುವು ದಾಖಲಿಸಲಾಗದೇ ಆಲೌಟ್ ಆಯಿತು.
ಟಿ20 ದೊಡ್ಡ ಟೂರ್ನಿಯ ನಿಮಿತ್ತ ನಾವು ವಿಶ್ರಾಂತಿ ಪಡೆದಿದ್ದು, ನಿವೃತ್ತಿ ಪಡೆದಿಲ್ಲ: ರೋಹಿತ್ ಶರ್ಮಾ!
ಜುಲೈ 31, ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಕ್ಯಾನ್ಸರ್ನಿಂದ ನಿಧನರಾದರು. ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ತುಂಬಾ ದಿನಗಳಿಂದ ಹೋರಾಟ ನಡೆಸಿ ಸಾವನ್ನಪ್ಪಿದ್ದಾರೆ. ಗಾಯಕ್ವಾಡ್ ಗೌರವಾರ್ಥವಾಗಿ ಭಾರತ ತಂಡವು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ODI ಸರಣಿಯ ಮೊದಲ ಪಂದ್ಯ ನಿನ್ನೆ ಕೊಲಂಬೊದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದಾರೆ.
ಅಂಶುಮಾನ್ ಗಾಯಕ್ವಾಡ್ ಅವರು ದೀರ್ಘಕಾಲದವರೆಗೆ ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಲಂಡನ್ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಮನವಿಯ ಮೇರೆಗೆ ಬಿಸಿಸಿಐ ಮತ್ತು ಇತರ ಅನೇಕ ಕ್ರಿಕೆಟಿಗರು ಗಾಯಕ್ವಾಡ್ ಚಿಕಿತ್ಸೆಗೆ ಹಣವನ್ನು ನೀಡಿದ್ದರು. ಜುಲೈ 31 ರಂದು ಅಂಶುಮಾನ್ ಗಾಯಕ್ವಾಡ್ ವಡೋದರಾದಲ್ಲಿ ಕೊನೆಯುಸಿರೆಳೆದರು. ಅವರ ನಿಧನಕ್ಕೆ ಇಡೀ ಕ್ರಿಕೆಟ್ ಜಗತ್ತು ಸಂತಾಪ ಸೂಚಿಸಿತು.