ಬೆಂಗಳೂರು:- ಖಾಸಗಿ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿಯ ಅಂತ್ಯವಾಗಿದೆ. ಇಂದು ಸಂಜೆ ನ್ಯಾಯಾಲಯಕ್ಕೆ SIT ಹಾಜರ ಪಡಿಸಲಿದೆ.
ಟ್ರಕ್ಕಿಂಗ್ ಗೆ ಹೋದವರ ದುರಂತ ಅಂತ್ಯ.. ಸಂತಾಪ ಸೂಚಿಸಿದ ನೂತನ ಸಂಸದ ಹೆಚ್ ಡಿಕೆ..!
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಎಸ್ಐಟಿ ಹಾಜರುಪಡಿಸಲಿದೆ. ನಿನ್ನೆ ಬೌರಿಂಗ್ ಆಸ್ಪತ್ರೆಯ ಪ್ರಜ್ವಲ್ ರನ್ನ ಕರೆದೊಯ್ಯುದು SIT ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಬಳಿಕ ಸಿಐಡಿ ಕಚೇರಿಗೆ ತಂದು ಮತ್ತೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ತಂದೆ ಎಚ್ ಡಿ ರೇವಣ್ಣ ಹೇಳಿಕೆಯಂತೆ ಪ್ರಜ್ವಲ್ ರೇವಣ್ಣ ಕೂಡಾ ಅದೇರೀತಿ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ.
ಯಾವ ಪ್ರಶ್ನೆಗೂ ಸರಿಯಾಗಿ ಉತ್ತರ ನೀಡ್ತಿಲ್ಲ. ತನಗೂ ಈ ಪ್ರಕರಣಕ್ಕೆ ಸಂಬಂಧ ವಿಲ್ಲ ಅನ್ನೋತರ ಹೇಳಿಕೆ ನೀಡಿದ್ದಾರೆ. ತನಿಖಾ ವರದಿಯನ್ನು ಕೋರ್ಟ್ ಗೆ SIT ಸಲ್ಲಿಕೆ ಮಾಡಲಿದೆ. ಮತ್ತೆ ಒಂದು ವಾರ ಕಸ್ಟಡಿಗೆ ಪಡೆಯಲು SIT ಮುಂದಾಗಿದೆ.
ಇನ್ನೂ ಪ್ರಜ್ವಲ್ ರೇವಣ್ಣನಿಗೆ ಇಂದು SIT ಕಸ್ಟಡಿನಾ ಅಥವಾ ನ್ಯಾಯಾಂಗ ಬಂಧನನಾ..? ಎಂಬ ಪ್ರಶ್ನೆ ಉದ್ಭವಿಸಿದೆ. ಇಂದು ಪ್ರಜ್ವಲ್ ರೇವಣ್ಣ SIT ಕಸ್ಟಡಿ ಅಂತ್ಯ ಹಿನ್ನೆಲೆ ಪ್ರಜ್ವಲ್ ನನ್ನು ಮತ್ತೆ ನ್ಯಾಯಾಲಯದ ಮುಂದೆ ಕೆಲ ಕಾರಣಗಳನ್ನು ನೀಡಿ SIT ಹಾಜರ್ ಪಡಿಸಲಿದೆ. ಹಾಜರು ಪಡಿಸಿ ಮತ್ತೆ ಕಸ್ಟಡಿಗೆ SIT ಕೇಳಲಿದೆ.
ವಿಚಾರಣೆಗೆ ಸರಿಯಾದ ಸಹಕಾರ ನೀಡುತ್ತಿಲ್ಲ,
ಮತ್ತೆ ಮಹಜರ್ ಇನ್ನು ಸಹ ಬಾಕಿ ಇದೆ ಎಂದು ಮತ್ತೆ ಕಸ್ಟಡಿಗೆ ಕೇಳಲು SIT ಚಿಂತನೆ ನಡೆಸಿದೆ. ಇನ್ನೂ ಎರಡು ಪ್ರಕರಣಗಳಲ್ಲಿ ಪ್ರಜ್ವಲ್ ನನ್ನು ವಿಚಾರಣೆ ಮಾಡಬೇಕಿದೆ..