ಬೆಂಗಳೂರು:- ಪ್ರಜ್ವಲ್ ನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸುವವುದಾಗಿ ಪೋಸ್ಟರ್ ನಲ್ಲಿ ಹೇಳಲಾಗಿದೆ.
ಜನತಾ ಪಕ್ಷ ಸದಸ್ಯರು ಎಂದು ಹೇಳಿಕೊಳ್ಳುತ್ತಿರುವ ಕೆಲ ಜನ ಲೈಂಗಿಕ ದೌರ್ಜನ್ಯಗಳ ಪ್ರಕರಣದಲ್ಲಿ ಕಳೆದ 15 ದಿನಗಳಿಂದ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ.
ನಗರದ ಶಿವಾನಂದ ಸರ್ಕಲ್ ಮತ್ತು ಶೇಷಾದ್ರಿಪುರಂ ಪ್ರದೇಶಗಳಲ್ಲಿ ಅವರು ಪೋಸ್ಟರ್ ಮೆತ್ತುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅಭಿಯಾನದ ಬಗ್ಗೆ ಸದಸ್ಯರೊಬ್ಬರು ಮಾತಾಡಿ ಒಬ್ಬ ಸಂಸದನನ್ನು ಪತ್ತೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ವಿಫಲವಾಗಿವೆ, ಹಾಗಾಗೇ ಕರ್ನಾಟಕ ಜನತಾ ಪಕ್ಷ ಪೋಸ್ಟರ್ ಅಭಿಯಾನ ಶುರುಮಾಡಿದೆ ಅಂತ ಹೇಳುತ್ತಾರೆ. ಬ್ಲ್ಯೂ ಕಾರ್ನರ್ ನೋಟೀಸ್ ಜಾರಿ ಮಾಡಿ ಇಂಟರ್ ಪೋಲ್ ಅನ್ನು ಅಲರ್ಟ್ ಮಾಡಿದರೂ ಪತ್ತೆಯಾಗದ ಪ್ರಜ್ವಲ್ ಪತ್ತೆ ಸಾಧ್ಯವಾ!?