ರಾಮನಗರ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಕ್ ಪ್ರಹಾರ ನಡೆಸಿದ್ದಾರೆ. ಉಪಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಚನ್ನಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ತಮ್ಮ ಭಾಷಣದ ಉದ್ದಕ್ಕೂ ಮಾಜಿ ಪ್ರಧಾನಿ ಹೆಚ್ ಡಿಡಿ ಅವರನ್ನೇ ಟಾರ್ಗೆಟ್ ಮಾಡಿ ನೇರ ದಾಳಿ ನಡೆಸಿದ್ದಾರೆ.
ಸಿನಿಮೀಯ ಸ್ಟೈಲಲ್ಲಿ ಬಸ್ ಚೇಸ್ ಮಾಡಿ BMTC ಚಾಲಕನ ಮೇಲೆ ಬೈಕ್ ಸವಾರನಿಂದ ಹಲ್ಲೆ!
ದೊಡ್ಡಮಳೂರಿನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಬೇಕಿತ್ತು. ಆದರೆ ನಿಖಿಲ್ಗೆ ಟಿಕೆಟ್ ಕೊಡಲಾಗಿದೆ. ದೇವೇಗೌಡರಿಗೆ ಪುತ್ರ, ಮೊಮ್ಮಗನ ವ್ಯಾಮೋಹ ಇಲ್ಲದೇ ಹೋಗಿದ್ದರೆ ಯೋಗೇಶ್ವರ್ʼಗೆ ಟಿಕೆಟ್ ಸಿಗುತಿತ್ತು. ಆದರೆ ಅವರು ಕೊಡಲಿಲ್ಲ. ನಾನು ಬಹಳ ವರ್ಷಗಳಿಂದ ದೇವೇಗೌಡರನ್ನು ನೋಡಿದ್ದೇನೆ. ದೇವೇಗೌಡರು ಯಾವ ಒಕ್ಕಲಿಗರನ್ನು ಬೆಳೆಸಲೂ ಇಲ್ಲ. ನಾನು ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ನನ್ನ ವಿರೋಧಿಸುತ್ತಾರೆ. ಆದರೆ ಮಿಸ್ಟರ್ ದೇವೇಗೌಡ ಒಕ್ಕಲಿಗರನ್ನೇ ಬೆಳೆಸಿದ್ದೀರಾ..? ದ್ವೇಷದ ರಾಜಕಾರಣ ಮಾಡುವುದರಲ್ಲಿ ದೇವೇಗೌಡ ನಂಬರ್ ಒನ್ ಎಂದು ಕಿಡಿ ಕಾರಿದ್ರು. ಪ್ರಧಾನಿ ಮೋದಿ ಅವರನ್ನು ಒಪ್ಪಿಸಿ ಮೇಕೆದಾಟು ಯೋಜನೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಮಿಸ್ಟರ್ ದೇವೇಗೌಡ.. ಮೋದಿ ಅವರು ಪ್ರಧಾನಿ ಆದರೆ ದೇಶ ಬಿಟ್ಟು ಹೋಗುವೆ ಅಂತಾ ಹೇಳಿದ್ದೀರಿ. ಅವರನ್ನು ನೀವು ಒಪ್ಪಿಸಲು ಆಗುತ್ತಾ..? ಎಂದು ಟೀಕಿಸಿದರು. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಯೋಗೇಶ್ವರ್ ಗೆಲ್ಲುವದು ಅಷ್ಟೇ ಸತ್ಯ. ದೇವೇಗೌಡರ ಕಣ್ಣೀರಿಗೆ ಮರಳಾಗದೇ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತಯಾಚನೆ ನಡೆಸಿದ್ರು.