ಧಾರವಾಡ: ಜನತಾ ಶಿಕ್ಷಣ ಸಂಸ್ಥೆಯ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯ ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಅರವಿಂದ ಜಮಖಂಡಿ ಹಾಗೂ ಸಿಬ್ಬಂದಿ, ಸ್ಥಳೀಯ ನಾಗರಿಕರು ವತಿಯಿಂದ ಸಂಪಿಗೆನಗರ ಜೋಡು ರಸ್ತೆ , ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಬಂಡೀಪುರದಲ್ಲಿ ಜಿಂಕೆ ಭೇಟಿಯಾಡಿ ಸಾಗುತ್ತಿರುವ ಹುಲಿ ಸೈಟಿಂಗ್ ; ಪ್ರವಾಸಿಗರು ದಿಲ್ ಖುಷ್
ಬಳಿಕ ಮಾತನಾಡಿದ ಅವರು , ಆಯುಕ್ತರು ನಮ್ಮ ಧಾರವಾಡ ಸ್ವಚ್ಛ ಧಾರವಾಡ ನಮ್ಮ ಧಾರವಾಡ ಚೆಂದದ ಧಾರವಾಡ ಎಂಬ ಘೋಷಣೆ ಕೂಗಿದರು. ಪ್ಲಾಸ್ಟಿಕ್ ಚೀಲಗಳ ಬಳಕೆ ಬೇಡ ಮತ್ತೆ ಬಟ್ಟೆ ಚೀಲಗಳ ಬಳಕೆ ಮಾಡಲು ಮನವಿ ಮಾಡಿದರು. ಗಿಡ ಮರಗಳ ಎಲೆಗಳಿಂದ ಎಂದಿಗೂ ಸಮಸ್ಯೆ ಆಗಿಲ್ಲ ಆದರೆ ಸಮಸ್ಯೆ ಆದರೆ ಅದು ಪ್ಲಾಸ್ಟಿಕ್ ನಿಂದ ಮಾತ್ರ ಎಂದರು.
ಎನ್.ಎಸ್.ಎಸ್. ಅಧಿಕಾರಿ ಈರಪ್ಪ ಪತ್ತಾರ ಮಾತನಾಡಿ, ಪ್ರತಿ ವರ್ಷದಂತೆ ನಾವು ಸ್ವಚ್ಛತೆಗೆ ಆದ್ಯತೆ ಕೊಟ್ಟು ಶಿಬಿರಗಳನ್ನು ಏರ್ಪಡಿಸಲಾಗಿದೆ. ಇಂದಿನ ಯುವಕರು ಮನೆಯಲ್ಲಿ ಕೆಲಸ ಮಾಡದೇ ಇದ್ದರು ಎನ್.ಎಸ್.ಎಸ್ ಶಿಬಿರದಲ್ಲಿ ಸಾರ್ವಜನಿಕವಾಗಿ ಕಸ ತೆಗೆದು, ಸ್ವಚ್ಚತೆಯನ್ನು ಮಾಡಿದ್ದು ಸಂತಸದ ವಿಷಯವೆಂದರು. ಕಾರ್ಯಕ್ರಮದಲ್ಲಿ ಮಹಾವೀರ ಉಪಾಧ್ಯಾಯ, ವಿಶ್ವನಾಥ ಯಲಿಗಾರ, ಎಮ್.ಡಿ.ಪಾಟೀಲ್, ಎಸ್.ಎನ್. ಗೌಡರ, ರವಿ ಪವಾರ, ಡಾ. ಸತೀಶ್ ಹೊನಕೇರಿ, ರವಿ ಶೆಟ್ಟಿ, ಸ್ಥಳೀಯ ನಾಗರಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು