2024ರ ಬಜೆಟ್ ಮಂಡನೆ ವೇಳೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಎನ್ ಪಿಎಸ್ ವಾತ್ಸಲ್ಯ ಎಂಬ ಹೊಸ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ಇದು ಅಪ್ರಾಪ್ರ ಭವಿಷ್ಯವನ್ನು ಗಟ್ಟಿಗೊಳಿಸಲು ಅವರ ಹೆತ್ತವರು ಅಥವ ಪೋಷಕರು ಕೈಗೊಳ್ಳಬಹುದಾದ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ.ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಇದಾಗಿದ್ದು, ಸರ್ಕಾರದಿಂದ ನಡೆಸಲ್ಪಡುವ ಪಿಂಚಣಿ ಯೋಜನೆಯಾಗಿದೆ. ನಿವೃತ್ತಿಯ ನಂತರವೂ ಆದಾಯ ಪಡೆಯಬಹುದು.
ಸೂರ್ಯೋಘರ್ ಉಚಿತ ವಿದ್ಯುತ್ ಯೋಜನೆ ಯಾರಿಗೆಲ್ಲಾ ಲಾಭ: ಅರ್ಜಿ ಸಲ್ಲಿಸೋದು ಹೇಗೆ?
ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದ ನಂತರ ಯೋಜನೆಯನ್ನು ಸುಲಭವಾಗಿ ಎನ್ಪಿಎಸ್ ಅಲ್ಲದ ಯೋಜನೆಯಾಗಿ ಪರಿವರ್ತಿಸಬಹುದು ಎಂದು ಹೇಳಿದ್ದಾರೆ. ಈ ಯೋಜನೆಯ ಅಡಿಯಲ್ಲಿ, ನಿಮ್ಮ ಕೆಲಸದ ಜೀವನದಲ್ಲಿ ನೀವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಬೇಕು. ಆದರೆ ಈಗ ಪೋಷಕರು ಈ ಯೋಜನೆಯಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಇಂದು ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎನ್ ಪಿಎಸ್ ವಾತ್ಸಲ್ಯ ಯೋಜನೆಯನ್ನು ಘೋಷಿಸಿದ್ದಾರೆ.
ಇದು ಮಕ್ಕಳಿಗಾಗಿ, ಅವರ ಭವಿಷ್ಯತ್ತನ್ನು ಗಟ್ಟಿಗೊಳಿಸಲಿಕ್ಕಾಗಿ ಆರಂಭಿಸಲಾಗುವ ಹೊಸ ಸ್ಕೀಂ. ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಒಂದಿಷ್ಟು ಹಣವನ್ನು ಮಕ್ಕಳಿಗಾಗಿ ಉಳಿತಾಯ ಮಾಡಲು ಅವಕಾಶವಿದೆ. ಇದಕ್ಕಾಗಿ, ಅಂಚೆ ಕಚೇರಿಯಲ್ಲಾಗಲೀ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಾಗಲೀ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್ ಪಿಎಸ್) ವಾತ್ಸಲ್ಯ ಖಾತೆಯನ್ನು ಆರಂಭಿಸಬೇಕು. ಪ್ರತಿ ತಿಂಗಳು ಅಥವಾ ನಿರ್ದಿಷ್ಟ ಅವಧಿಯ ಅಂತರದಲ್ಲಿ ಈ ಖಾತೆಗೆ ಹಣ ವರ್ಗಾಯಿಸುವ ಮೂಲಕ ಮಕ್ಕಳ ಹೆತ್ತವರು ಇದರಲ್ಲಿ ಸೇವಿಂಗ್ಸ್ ಮಾಡಬಹುದು.
ಖಾತೆಯನ್ನು ತೆರೆಯುವಾಗ, ನೀವು ಶ್ರೇಣಿ 1 ರಲ್ಲಿ 500 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇದರ ನಂತರ, 1000 ರೂಗಳನ್ನು ಟೈರ್ 2 ರಲ್ಲಿ ಠೇವಣಿ ಮಾಡಬೇಕು. ಪ್ರತಿ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡಬೇಕು.
ನಿವೃತ್ತಿಯ ಸಮಯದಲ್ಲಿ NPS ನಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತದ 60 ಪ್ರತಿಶತವನ್ನು ನೀವು ಒಟ್ಟು ಮೊತ್ತದಲ್ಲಿ ಹಿಂಪಡೆಯಬಹುದು, ಉಳಿದ 40 ಪ್ರತಿಶತ ಮೊತ್ತವು ಪಿಂಚಣಿ ಯೋಜನೆಗೆ ಹೋಗುತ್ತದೆ. ಎನ್ಪಿಎಸ್ನಲ್ಲಿ ಹೂಡಿಕೆಗೆ ಯಾವುದೇ ಮಿತಿಯಿಲ್ಲ.
ಈ ಯೋಜನೆಯಿಂದ ಮಕ್ಕಳಿಗಾಗುವ ಲಾಭಗಳೇನು?
ಈ ಯೋಜನೆಯಡಿ, ಆರಂಭದಲ್ಲೇ ಮಕ್ಕಳಿಗೆ ಯಾವುದೇ ಲಾಭವಿಲ್ಲ. ಆದರೆ, ಮಕ್ಕಳಿಗೆ ನಿವೃತ್ತಿ ವಯಸ್ಸು ಅಂದರೆ 58ರಿಂದ 60 ವರ್ಷದ ಸಂದರ್ಭದಲ್ಲಿ ಅವರಿಗೆ ಒಂದು ನಿಶ್ಚಿತ ಆದಾಯ ಬರುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಇದಕ್ಕೆ ಸಾಮಾನ್ಯವಾಗಿ ಇದಕ್ಕೆ ಸರ್ಕಾರದಿಂದ ನೀಡಲಾಗುವ ಬಡ್ಡಿಯ ದರ ಉಳಿದ ಉಳಿತಾಯ ಯೋಜನೆಗಳಿಗಿಂತ ಸ್ವಲ್ಪ ಜಾಸ್ತಿ ಇರುತ್ತದೆ. ಹಾಗಾಗಿ, ಇದರಲ್ಲಿ ಹೂಡಿಕೆ ಮಾಡಿದರೆ ಲಾಭ ಜಾಸ್ತಿ.
ಇಲ್ಲಿ ಮಕ್ಕಳ ಹೆಸರಿನಲ್ಲಿ ಪಾಲಿಸಿಗಳನ್ನು ತೆಗೆದುಕೊಂಡು, ಮಕ್ಕಳ ಪರವಾಗಿ ಹೆತ್ತವರು ಅಥವಾ ಪೋಷಕರು ಹಣ ಹೂಡಿಕೆ ಮಾಡಬಹುದು. ಮಕ್ಕಳು, ಪ್ರಾಪ್ತ ವಯಸ್ಸಿಗೆ ಕಾಲಿಟ್ಟ ನಂತರ ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಾಗಿ (ಎನ್ ಪಿಎಸ್) ಯೋಜನೆಯ ಪಾಲಿಸಿಯನ್ನಾಗಿ ಪರಿವರ್ತಿಸಬಹುದು.