ಚಿತ್ರದುರ್ಗ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಹೊಡೆತಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ತಡೆದುಕೊಳ್ಳುವುದಿಲ್ಲ ಎಂದು ಬಿಜೆಪಿ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ಚಿತ್ರದುರ್ಗ ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಆರ್ಎಸ್ಎಸ್ ಅನ್ನು ನಾವು ಬ್ಯಾನ್ ಮಾಡುತ್ತೇವೆ ಎಂದು ನಾವು ಎಲ್ಲಿಯೂ ಹೇಳಿಲ್ಲ.
ಸಾರ್ವಜನಿಕ ಹಾನಿ ಮಾಡಿದ ಸಂಘ ಯಾವುದೇ ಇದ್ರೂ ಕ್ರಮ ಅಂತಾ ಹೇಳೀದ್ದಿವಿ ” ಎಂದರು. ಬಿಜೆಪಿಯವರಿಗೆ ಏನೂ ಸಿಗ್ತಿಲ್ಲ, ಅದಕ್ಕೆ ಒಂದೇನಾದ್ರೂ ಹುಡುಕಕ್ಕೆ ಹೋಗ್ತಿದ್ದಾರೆ ಅಷ್ಟೇ, ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡೋಕೆ ಇವರಿಗೆ 6 ತಿಂಗಳು ಬೇಕಾಯ್ತು, ಇವರಿಬ್ಬರ ಸ್ಥಿತಿ ಈ ಪಾರ್ಲಿಮೆಂಟ್ ಚುನಾವಣೆ ಮುಗಿಲೀ ಗೊತ್ತಾಗುತ್ತೆ ಎಂದರು. ಈಗಾಗಾಲೇ ಯತ್ನಾಳ್ ಶುರು ಮಾಡ್ಕೊಂಡಿದಾರೆ. ಯತ್ನಾಳ್ ಹೊಡೆತನ್ನು ಬೊಮ್ಮಾಯಿ, ಯಡಯೂರಪ್ಪನೇ ತಡಕೋಳಕ್ಕಾಗಿಲ್ಲ,
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಇವರಿಬ್ಬರೂ ತಡಕೋತಾರಾ ನೋಡೋಣ ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸನವರು ಬಚ್ಚಾಗಳು ಎಂಬ ಆರ್. ಅಶೋಕ್ ಹೇಳಿಕೆಗೆ ಕಿಡಿಕಾರಿದ ಕೃಷಿ ಸಚಿವರು ನಾವೆಲ್ಲ ಬಚ್ಚಾಗಳಾ?, ಸರಿಯಪ್ಪಾ ಸಾಮ್ರಾಟ್ ನಿನಗೆ ತುಂಬಾ ಧನ್ಯವಾದಗಳು. ನಮ್ಮನ್ನೆಲ್ಲ ಭಸ್ಮ ಮಾಡೋ ಶಿವನ ಶಕ್ತಿಯಲ್ಲ ಅಶೋಕ್ ತೆಗೆದುಕೊಂಡಿದ್ದಾರೆ. ಈಗ ಬ್ರಹ್ಮ, ವಿಷ್ಣು, ಮಹೇಶ್ವರ ಯಾರು ಗೊತ್ತಿಲ್ಲ ಟೈಮ್ ಬರಲಿ ಕಾದು ನೋಡೋಣ ಬಿಡಿ ಎಂದರು.