ಸೆಕೆಂಡ್ ಹ್ಯಾಂಡ್ ಕಾರು-ಬೈಕ್ ಮಾತ್ರವಲ್ಲ ವಿಮಾನ ಕೂಡ ಸಿಗುತ್ತಂತೆ. ಹಾಗಿದ್ರೆ ಬೆಲೆ ಎಷ್ಟು, ಎಲ್ಲಿ ಖರೀದಿಸಬಹುದು ಎಂಬೆಲ್ಲಾ ಮಾಹಿತಿ ತಿಳಿಯೋಣ.
ಟೀಕೆಗೆ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್: ಶತಕದ ಬರ ನೀಗಿಸಿ ಕೊಟ್ರೂ ಖಡಕ್ ಎಚ್ಚರಿಕೆ!
ನೀವು ಬಳಸಿದ ಅಂದರೆ ಸೆಕೆಂಡ್ ಹ್ಯಾಂಡ್ ವಿಮಾನವನ್ನು ಖರೀದಿಸಬಹುದು, ಇದಕ್ಕೆ ಒಳ್ಳೆಯ ಡಿಮ್ಯಾಂಡ್ ಇದೆ. ಬ್ರೋಕರ್ಗಳು, ಆನ್ಲೈನ್ ಮಾರುಕಟ್ಟೆಗಳು ಮತ್ತು ಹರಾಜುಗಳ ಮೂಲಕ ಅನೇಕ ವಿಮಾನಗಳು ಮಾರಾಟಕ್ಕೆ ಲಭ್ಯವಿವೆ. ಬಳಸಿದ ವಿಮಾನವನ್ನು ಖರೀದಿಸುವಾಗ, ನಿರ್ವಹಣೆ ಹಿಸ್ಟರಿ, Airworthiness ಮತ್ತು ಏನಾದರು ಮಾರ್ಪಾಡು ಮಾಡಲಾಗಿದೆಯೆ ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಭಾರತದಲ್ಲಿ ಬಳಸಿದ ವಿಮಾನಗಳ ಬೆಲೆ ಹಲವಾರು ಅಂಶಗಳನ್ನು ಅವಲಂಬಿಸಿ ಬದಲಾಗಬಹುದು.
ಭಾರತದಲ್ಲಿ ಸ್ಮಾಲ್ ಜನರಲ್ ಏವಿಯೇಷನ್ ಏರ್ಕ್ರಾಫ್ಟ್ ಖಾಸಗಿ ವಿಮಾನವಾಗಿದ್ದು ಇದರ ಸೆಕೆಂಡ್ ಹ್ಯಾಂಡ್ ಬೆಲೆ 25 ಲಕ್ಷದಿಂದ 4 ಕೋಟಿ ರೂ. ಇದೆ. ಇವರ ವೆಬ್ಸೈಟ್ಗೆ ಹೋಗುವ ಮೂಲಕ ನೀವು ಸೆಸ್ನಾ ಅಥವಾ ಪೈಪರ್ ವಿಮಾನಗಳನ್ನು ಕಡಿಮೆ ಬೆಲೆಗೆ ಸುಲಭವಾಗಿ ಖರೀದಿಸಬಹುದು.
ಸಣ್ಣ ವಿಮಾನಗಳಾಗಿರುವ ಪ್ರಾದೇಶಿಕ ಜೆಟ್ಗಳನ್ನು ಕಡಿಮೆ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 100 ಕ್ಕಿಂತ ಕಡಿಮೆ ಜನರು ಕುಳಿತುಕೊಳ್ಳಬಹುದು. ಸೆಕೆಂಡ್ ಹ್ಯಾಂಡ್ ನಲ್ಲಿ ಇದನ್ನು ನೀವು 8 ಕೋಟಿಯಿಂದ 40 ಕೋಟಿ ರೂಪಾಯಿಗೆ ಖರೀದಿಸಬಹುದು. ಇದು Bombardier Q400 ಮತ್ತು Embraer E175 ನಂತಹ ವಿಮಾನಗಳನ್ನು ಹೊಂದಿದೆ.
ನ್ಯಾರೋ-ಬಾಡಿ ಜೆಟ್ಗಳು ಅಂದರೆ 100 ರಿಂದ 200 ಜನರು ಕುಳಿತುಕೊಳ್ಳಬಹುದಾದ ಸಣ್ಣ ಮತ್ತು ವಾಣಿಜ್ಯ ವಿಮಾನಗಳ ಬೆಲೆ 40 ರಿಂದ 240 ಕೋಟಿ ರೂ. ಆಗಿದೆ.
ವೈಡ್-ಬಾಡಿ ಏರ್ಕ್ರಾಫ್ಟ್ ಇದು ದೊಡ್ಡ ವಿಮಾನಗಳು. ಈ ವಿಮಾನವನ್ನು ದೀರ್ಘ-ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅನೇಕ ಪ್ರಯಾಣಿಕರು ಮತ್ತು ಸರಕುಗಳನ್ನು ಏಕಕಾಲದಲ್ಲಿ ಒಂದು ದೇಶದಿಂದ ಇನ್ನೊಂದಕ್ಕೆ ಸಾಗಿಸಬಹುದು. ಇದು ಬೋಯಿಂಗ್ 777 ಮತ್ತು ಏರ್ಬಸ್ A330 ನಂತಹ ವಿಮಾನಗಳನ್ನು ಒಳಗೊಂಡಿದೆ.
ನೀವು ಭಾರತದ ಹಲವು ಮೂಲಗಳಿಂದ ಸೆಕೆಂಡ್ ಹ್ಯಾಂಡ್ ವಿಮಾನಗಳನ್ನು ಖರೀದಿಸಬಹುದು.