ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ರೌಡಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಜಬಿವುದ್ದಿನ್ ಹಾಗೂ ಮಹಮದ್ ಮೆಹತಾಬ್ ಬಂಧಿತ ರೌಡಿಗಳಾಗಿದ್ದು, ಈ ಹಿಂದೆ 2014 ಹಾಗೂ 2015 ರಲ್ಲಿ ಇಬ್ಬರನ್ನ ಬಂಧಿಸಲಾಗಿತ್ತು..
ನಂತರ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ತಲೆಮರಿಸಿಕೊಂಡಿದ್ದರು. ಜಬಿವುದ್ದೀನ್ ಮೇಲೆ 33 ಪೊಲೀಸ್ ಠಾಣೆಯಲ್ಲಿ 73 ಪ್ರಕರಣಗಳು ದಾಖಲಾಗಿವೆ. 36 ಬಾರಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು..
ಇನ್ನೂ ಮತ್ತೊಬ್ಬ ಆರೋಪಿ ಮೆಹತಾಬ್ ವಿರುದ್ಧ 12 ಪೋಲಿಸ್ ಠಾಣೆಯಲ್ಲಿ 31 ಪ್ರಕರಣ ದಾಖಲಾಗಿತ್ತು. ಈ ಪೈಕಿ 19 ಪ್ರಕರಣಗಳಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿ ಜಯನಗರ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.