ಕಲಬುರಗಿ: ಪರಿಸರ ಕಾಯಿದೆ ಉಲ್ಲಂಘನೆ ಮಾಡಿದ ಯಾವ ಕಾರ್ಖಾನೆ ಇದ್ರೂ ಕ್ರಮ ತಪ್ಪಿದ್ದಲ್ಲ ಅದರಂತೆ ಶಾಸಕ ಯತ್ನಾಳ್ ಮಾಲೀಕತ್ವದ ಕಾರ್ಖಾನೆ ಸಹ ಸೇರಿದೆ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಖಂಡ್ರೆ ಚಿಂಚೋಳಿಯ ಯತ್ನಾಳ್ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘಿಸಿ ಕಬ್ಬು ಅರೆದಿದೆ ಮಾತ್ರವಲ್ಲ ಇನ್ನೂ ಹಲವು ನಿಯಮಗಳನ್ನ ಗಾಳಿಗೆ ತೂರಿದೆ.ಈಗಾಗಲೇ ಕಳೆದ ವರ್ಷ ಕೇಂದ್ರ ಪರಿಸರ ಮಂಡಳಿ ಒಂದೂವರೆ ಕೋಟಿ ದಂಡ ವಸೂಲಿ ಮಾಡಿದೆ ಆದ್ರೂ ಮತ್ತೆ ನಿಯಮ ಉಲ್ಲಂಘನೆ ಆಗಿದೆ..ಹೀಗಾಗಿ ಇಲಾಖೆ ಕ್ರಮ ಕೈಗೊಂಡಿದೆ ಒಟ್ಟಾರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಅಂತ ಹೇಳಿದ್ರು..