ಬೆಂಗಳೂರು: ಹಿರೇಮಗಳೂರಿನ ಅರ್ಚಕರಿಗೆ ವೇತನ ತಡೆ ಹಿಡಿದು ನೋಟಿಸ್ ಕೊಟ್ಟ ವಿಚಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಬಳ ವಾಪಸ್ ಕೇಳಿ ನೋಟಿಸ್ ನೀಡಿರುವ ವಿಚಾರದಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಹಿರೇಮಗಳೂರು ಕಣ್ಣನ್ (Hiremagaluru Kannan) ತಪ್ಪಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.
ಹಾಗೆ ಪ್ರತಿವರ್ಷ ದೇವಸ್ಥಾನಕ್ಕೆ ತಸ್ತಿಕ್ ಹಣ ಅಂತ ಕೊಡ್ತಾರೆ. ಮುಜರಾಯಿ ದೇವಸ್ಥಾನಗಳಿಗೆ ಈ ಹಣ ಕೊಡ್ತಾರೆ. 2013 ರಲ್ಲಿ 24 ಸಾವಿರ ತಸ್ತಿಕ್ ಹಣ ಇತ್ತು, ತಹಶೀಲ್ದಾರ್ 24 ಸಾವಿರ ಕೊಡುವ ಬದಲು 90 ಸಾವಿರ ಹಣ ನೀಡಿದ್ದಾರೆ. ತಹಶೀಲ್ದಾರ್ ತಪ್ಪು ಇದು.. ಕಣ್ಣನ್ ಅವ್ರ ತಪ್ಪಲ್ಲ ಎಂದು ಹೇಳಿದರು.
ತಹಶೀಲ್ದಾರ್ ಬಳಿಯೇ ಹಣ ಪಡೆಯುತ್ತೇವೆ. ಕಣ್ಣನ್ ಅವರ ಬಳಿ ಹಣ ಕೇಳಲ್ಲ. ನಾನು ಆಯುಕ್ತರ ಜೊತೆ ಈ ಬಗ್ಗೆ ಮಾತನಾಡ್ತೇನೆ. ತಲೆ ಸರಿಯಿಲ್ಲದವರು ಈ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನ ಹೇಳ್ತಿದ್ದಾರೆ. 10 ವರ್ಷದ ಹಣವನ್ನ ತಹಶೀಲ್ದಾರ್ ರಿಂದಲೇ ವಸೂಲಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.