ಬೆಂಗಳೂರು: ಇಡಿ ಅಧಿಕಾರಿಗಳಿಂದ ಸ್ನೇಹಮಯಿ ಕೃಷ್ಣಗೆ ನೊಟೀಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಸ್ನೇಹಮಯಿ ಕೃಷ್ಣ ಹೌದು .. ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೊಟೀಸ್ ನೀಡಿದ್ರು ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ದಾಖಲೆ ಕೇಳಿದ್ರು ಆಸ್ತಿ ಪತ್ರ, ಅಕೌಂಟ್ ಡೀಟೆಲ್ಸ್, ಆದಾಯದ ಮಾಹಿತಿ ಕೇಳಿದ್ದಾರೆ.. ಅದರ ಸಂಬಂಧ ದಾಖಲೆ ಸಮೇತ ವಿಚಾರಣೆಗೆ ಬರೋಕೆ ಹೇಳಿದ್ರು ಇ.ಡಿ ಅಧಿಕಾರಿಗಳ ತನಿಖೆ ಪ್ರಕಾರ ಮೊದಲು ದೂರುದಾರರ ದಾಖಲೆಗಳನ್ನ ಪರಿಶೀಲನೆ ನಡೆಸ್ತಾರೆ ಹೀಗಾಗಿ ಮೊದಲು ನನ್ನ ವಿಚಾರಣೆಗೆ ಕರೆದಿದ್ದಾರೆ.
50 ಕೋಟಿ ಹಣಕ್ಕೆ ಬೇಡಿಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಉದ್ಯಮಿ ದೂರು!
500ಪುಟಗಳ ದಾಖಲೆಗಳನ್ನ ಸಲ್ಲಿಸಿ ವಿಚಾರಣೆಗೆ ಹಾಜರಾಗ್ತಿದೀನಿ ಕೇಸ್ ಹಿಂದೆ ಕಾಣದ ಕೈಗಳು ಇದ್ಯಾ ಅನ್ನೋ ವಿಚಾರ ಇಲ್ಲಿ ಸಿಎಂ ವಿರುದ್ಧ ಹೋರಾಡಲು ಯಾರಾದರೇನು ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಸಿಎಂ ವಿರುದ್ಧ ಹೋರಾಟ ಮಾಡಬಹುದು.
ಸಿಎಂ ವಿರುದ್ಧ ಒಬ್ಬ ಮಧ್ಯಮವರ್ಗದವನು ಹೋರಾಟ ಮಾಡಬಾರದಾ..? ಇಲ್ಲಿ ಕಾಣದ ಕೈಗಳು ಇದಾವೋ ಇಲ್ವೋ ಅನ್ನೋದು ಮುಖ್ಯ ಅಲ್ಲ. ಸಿಎಂ ವಿರುದ್ಧ ಕೇಳಿ ಬಂದಿರೋ ಆರೋಪ ಎಷ್ಟು ಸತ್ಯ ಅಥವಾ ಸುಳ್ಳು ಅನ್ನೋದು ನೋಡಬೇಕು ಹಾಗೇನಾದ್ರು ನನ್ನ ಮೇಲೆ ಅನುಮಾನ ಇದ್ರೆ ಯಾವ ತನಿಖಾ ಸಂಸ್ಥೆಯಾದ್ರೂ ನನ್ನ ವಿಚಾರಣೆ ನಡೆಸಬಹುದು..
ಸಿಬಿಐಗೆ ವರ್ಗಾವಣೆ ವಿಚಾರ ಬಗ್ಗೆಯೂ ಮಾತನಾಡಿ, ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸ್ತಿದ್ದಾರೆ ನನ್ನ ಕಣ್ಣಮುಂದೆಯೆ ಕೇಸ್ ತನಿಖೆ ಶುರು ಮಾಡಿದ್ರು ಆದರೂ ನಾನು ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದೀನಿ ಸಿಬಿಐ ತನಿಖೆ ಬಗ್ಗೆ ನಮ್ಮ ವಕೀಲರು ವಾದ ಮಾಡ್ತಾರೆ ಅದನ್ನ ನೋಡಿ ನ್ಯಾಯಾಧೀಶರು ಸಿಬಿಐ ತನಿಖೆಗೆ ಆದೇಶ ನೀಡ್ತಾರೋ ಇಲ್ವೋ ನೋಡಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.