ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಏನೂ ಹೇಳಿಲ್ಲ. ಯಾವ ಒತ್ತಡವೂ ನನಗೆ ಬಂದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಏನೂ ಹೇಳಿಲ್ಲ. ಯಾವ ಒತ್ತಡವೂ ನನಗೆ ಬಂದಿಲ್ಲ. ಅದನ್ನ ನಾನು ಕೇಳಿಯೂ ಇಲ್ಲ ಎಂದರು.
ಇನ್ನೂ ನಾನು ಈಗ ಸಿಎಂ ಅಭ್ಯರ್ಥಿ ಎಂದು ಕ್ಲೇಮ್ ಮಾಡ್ತಿಲ್ಲ. 2028 ಕ್ಕೆ ಸಿಎಂ ಅಂತ ಹೇಳಿದ್ದೇನೆ. ಮೊದಲಿನಿಂದಲೂ ಹೇಳ್ತಿದ್ದೇನೆ. ಆಗ ನಾನೇ ಸಿಎಂ ಅಂತ ಕ್ಲೇಮ್ ಮಾಡ್ತಿಲ್ಲ. ನಾನು ಸಿಎಂ ಆಕಾಂಕ್ಷಿ ಅಂತ ಅಷ್ಟೇ ಹೇಳ್ತಿರೋದು. ನನ್ನಂತೆ ಆಕಾಂಕ್ಷಿಗಳು ಇರ್ತಾರೆ. ನಾನೇ ಆಗ್ತೇನೆ ಅಂತ ಏನೂ ಹೇಳ್ತಿಲ್ಲ. ಆದರೆ 2028 ರವರೆಗೆ ಈ ಹುದ್ದೆಯ ಆಕಾಂಕ್ಷಿ ನಾನಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
Relationship Satisfaction: ಹೆಂಡತಿಗೆ ಲೈಂಗಿಕ ಸುಖ ಸಿಕ್ಕಿದೆಯೇ ಎಂದು ತಿಳಿಯುವುದು ಹೇಗೆ ಗೊತ್ತಾ..?
ಸಿಎಂ ಐದು ವರ್ಷ ಇರ್ತಾರೆ ಎಂದು ಸ್ವತಃ ಡಿ.ಕೆ.ಸುರೇಶ್ ಅವರೇ ಅಂದಿದ್ದಾರೆ. ಆದರೆ ಸಿಎಂ ವಿಚಾರದ ಒಪ್ಪಂದದ ಬಗ್ಗೆ ಗೊತ್ತಿಲ್ಲ ಎಂದರು. ಇನ್ನು ಹಾಸನ ಸಮಾವೇಶದ ಬಗ್ಗೆ ಮಾತನಾಡಿ, ಹಾಸನ ಸಮಾವೇಶ ಬದಲಾವಣೆ ವಿಚಾರ. ಲೀಡರ್,ಐಡಿಯಾಲಜಿ ಎಲ್ಲಾ ಒಂದೇ ಆಗಿದೆ. ಆದರೆ ಬ್ಯಾನರ್ ಚೇಂಜ್ ಆಗಿದೆ ಅಷ್ಟೇ ಎಂದರು.