ಬೆಂಗಳೂರು: ಖಜಕಿಸ್ತಾನ ಮೂಲದವಳು. 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಕೆ ಇಲ್ಲೇ ಪ್ರೀತಿಸಿ ಮದ್ವೆ ಆಗಿದ್ಳು. ಆದ್ರೆ ಗಂಡ ಸತ್ತ ಬಳಿಕ ವೇಶ್ಯಾವಾಟಿಕೆ ಕಡೆ ಆಕೆಯ ಮನಸ್ಸು ಸೆಳೆದಿತ್ತು. ದೇಶ ವಿದೇಶದಿಂದ ಚೆಂದ ಚೆಂದ ಹುಡುಗಿಯರನ್ನ ನಗರಕ್ಕೆ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸ್ತಾ ಇದ್ಳು. ಈಕೆಗೆ ಇಬ್ಬರು ಸಾಫ್ಟ್ ವೇರ್ ಇಂಜನಿಯರ್ ಗಳು ಸಹಕಾರ ಮಾಡ್ತಾ ಇದ್ದು ಈಗ ಮೂವರು ಪೊಲೀಸರ ಅತಿಥಿಗಳಾಗಿದ್ದಾರೆ.
ಹೀಗೆ ಮುಖ ಮುಚ್ಕೊಂಡು ಕೂತಿದಾಳಲ್ಲ ಈಕೆಯ ಹೆಸರು ಬಿನಾಜ್. ಮೂಲತ: ಖಜಕಿಸ್ತಾನದವಳು. 15 ವರ್ಷಗಳ ಹಿಂದೆ ನಗರಕ್ಕೆ ಬಂದ ಈಕೆ ಇಲ್ಲೆ ಒಬ್ಬರನ್ನು ಪ್ರೀತಿಸಿ ಮದುವೆ ಆಗಿದ್ಳು.ಗಂಡ ಸತ್ತ ಬಳಿಕ ವೇಶ್ಯಾವಾಟಿಕೆ ಕಡೆ ಗಮನ ಸೆಳೆದಿತ್ತು. ಬಳಿಕ ತಾನೇ ಕಿಂಗ್ ಪಿನ್ ಆಗಿ ಬದಲಾಗಿದ್ಳು. ರಷ್ಯಾ, ಖಜಸಿಸ್ತಾನ, ಉಜ್ವೇಕಿಸ್ತಾನ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಹುಡುಗಿಯರನ್ನು ಕರೆಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸ್ತಾ ಇದ್ಳು. ಇನ್ನು ಈಕೆಗೆ ಸಪೋರ್ಟ್ ಆಗಿ ಇಬ್ಬರು ಸಾಫ್ಟ್ ವೇರ್ ಇಂಜನಿಯರ್ ಗಳು ಇದ್ರು. ಅವರೇ ನೋಡಿ ವೈಶಾಕ್ ಹಾಗೂ ಗೋವಿಂದರಾಜು.
ಇನ್ನು ಈ ಇಬ್ಬರು ಟೆಕ್ಕಿಗಳು ಟೆಲಿಗ್ರಾಂನಲ್ಲಿ ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ಕೆಲವರನ್ನು ಜಾಯಿನ್ ಮಾಡ್ತಾ ಇದ್ರು. ಬಳಿಕ ವಿದೇಶಿ ಹುಡುಗೀರ ಪೋಟೋ ಆ ಗ್ರೂಪಲ್ಲಿ ಹಾಕಿ ಒಂದೊಂದು ಪೋಟೋಗೆ ಒಂದೊಂದು ರೇಟ್ ಫಿಕ್ಸ್ ಮಾಡ್ತಾ ಇದ್ರು. ಯಾರು ಯಾವ ಹುಡುಗೀನ ಸೆಲೆಕ್ಟ್ ಮಾಡ್ತಾರೋ ಅವರ ಬಳಿ ಏಜೆಂಟ್ ಗಳ ಮೂಲ ಕಹುಡುಗಿಯರನ್ನು ಕಳಿಸ್ತಾ ಇದ್ರು. ಇನ್ನು ಈ ಇಬ್ಬರು ಟೆಕ್ಕಿಗಳು ಬಿನಾಜ್ ಫ್ಲಾನ್ ನಂತೆ ಕೆಲಸ ಮಾಡ್ತಾ ಇದ್ರು. ಒಂದೊಂದೆ ಲಿಂಕ್ ಜಾಡು ಹಿಡಿದು ಹೋದ ಬಯ್ಯಪ್ಪನಹಳ್ಳಿ ಪೊಲೀಸರು ಈಗ ಮೂವರನ್ನು ಬಂಧಿಸಿದ್ದು, 9 ವಿದೇಶಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ಮಹದೇವಪುರದ ನಿರ್ವಾಣ ಹೈಟೆಕ್ ಸ್ಫಾ ಮೇಲೆ ದಾಳಿ ಪ್ರಕರಣ ಕೇಸಲ್ಲಿ ಸಿಸಿಬಿ ಪೊಲೀಸರು 40 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. 33 ಭಾರತಿಯರು, ಏಳು ಜನ ವಿದೇಶಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ದಾಳಿ ವೇಳೆಯಲ್ಲಿ 47 ಜನ ಗ್ರಾಹಕರು ಸಿಕ್ಕಿದ್ದಾರೆ. 23 ಜನ ಕೆಲಸಗಾರರನ್ನು ಈಗಾಗಲೇ ವಿಚಾರಣೆ ಮಾಡಲಾಗಿದ್ದು ಅವರನ್ನು ಸಾಕ್ಷಿಗಳಾಗಿ ಮಾಡಿದ್ದಾರೆ. ಇನ್ನು ಸ್ಫಾ ಮಾಲೀಕ ಅನಿಲ್ ರೆಡ್ಡಿನ ಬಂಧನ ಮಾಡಲಾಗಿದ್ದು ಆತನಿಂದ 5 ಲಕ್ಷ 18 ಸಾವಿರ ವಶಕ್ಕೆ ಪಡೆಯಲಾಗಿದೆ. ಸದ್ಯ ಮಾರತ್ ಹಳ್ಳಿ ಎಸಿಪಿ ಪ್ರಿಯದರ್ಶಿನಿ ನೇತೃತ್ವದಲ್ಲಿ ತನಿಖೆ ಮಾಡಲಾಗ್ತಾ ಇದ್ದು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ರೆ ಕ್ರಮ ಜರುಗಿಸ್ತೀವಿ ಅಂತಿದ್ದಾರೆ ನಗರ ಪೊಲೀಸ್ ಆಯುಕ್ತ ದಯಾನಂದ್.
ಒಟ್ನಲ್ಲಿ ನಗರದಲ್ಲಿ ಈ ಹೈಟೆಕ್ ವೇಶ್ಯಾವಾಟಿಕೆ ದಂಧೆಗಳು ದಿನೇ ದಿನೇ ಹೆಚ್ಚಾಗ್ತಾ ಇದ್ದು, ನಗರದಾದ್ಯಂತ ಪೊಲೀಸರಿಗೆ ಹದ್ದಿನ ಕಣ್ಣಿಡಲು ಕಮೀಷನರ್ ಸೂಚನೆ ನೀಡಿದ್ದಾರೆ. ಇದುವರೆಗೂ ಸಿಕ್ಕ ವೇಶ್ಯಾವಾಟಿಕೆ ಕಿಂಗ್ ಪಿನ್ಗಳನ್ನು ತೀವ್ರ ವಿಚಾರಣೆ ಮಾಡ್ತಾ ಇದ್ದು, ವಿಚಾರಣೆ ಬಳಿಕ ಮತ್ತಷ್ಟು ಸ್ಪೋಟಕ ವಿಚಾರಗಳು ಹೊರಬೀಳಲಿವೆ.