ಬೆಂಗಳೂರು:- ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಸಮಯ ಬದಲಾವಣೆ ಮಾಡಲಾಗಿದೆ. ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ
ಟೀಮ್ ಇಂಡಿಯಾಗೆ ಬಿಗ್ ಶಾಕ್: ವಲಸೆ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟರ್!
ಸೋಮವಾರ (ಜನವರಿ 13) ದಿನದಂದು ಮಾತ್ರ ಮೆಟ್ರೋ ಸೇವೆ ಮುಂಜಾನೆ ಬೆಳಗ್ಗೆ 4.15ರಿಂಲದೇ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯು ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಎಲ್ಲಾ ನಿಲ್ದಾಣಗಳಿಂದ ಮೆಟ್ರೋ ಸೇವೆಯನ್ನು 2025ರ ಜನವರಿ 13ರಿಂದ ಜಾರಿಗೆ ಬರುವಂತೆ ಬೆಳಗ್ಗೆ 4:15 ರಿಂದ ಪ್ರಾರಂಭಿಸಲಿದೆ.
ಈಗ ಮುಂಜಾನೆ 5:00 ಮೆಟ್ರೋ ಸೇವೆ ಆರಂಭವಾಗುತ್ತಿದ್ದು, ಅದನ್ನು ಸೋಮವಾರ ಮಾತ್ರ 45 ನಿಮಿಷ ಮುಂಚಿತವಾಗಿ ಆರಂಭಿಸಲಾಗುತ್ತಿದೆ. ಉಳಿದಂತೆ ವಾರದ ಉಳಿದ ಎಲ್ಲ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು BMRCL ಹೇಳಿದೆ.