ಬೆಂಗಳೂರು:- ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಕರ್ನಾಟಕ ಸರಕಾರ ಹಲವು ಬಾರಿ ಕಾಲಾವಕಾಶವನ್ನು ನೀಡಿದೆ. ಅಷ್ಟೇ ಅಲ್ಲದೇ ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಗ್ರಾಮಗಳಲ್ಲಿಯೇ ಕ್ಯಾಂಪ್ ನಡೆಸುವ ಮೂಲಕ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ಮನೆಯ ಯಜಮಾನಿಯರು 8000 ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ. ಮುಂದಿನ ಕಂತಿನ ಹಣ ಸದ್ಯದಲ್ಲಿಯೇ ಗೃಹಿಣಿಯರ ಕೈ ಸೇರಲಿದೆ. ರಾಜ್ಯ ಸರಕಾರದ ಗೃಹಲಕ್ಷ್ಮೀ ಕ್ಯಾಂಪ್ , ಗೃಹಲಕ್ಷ್ಮೀ ಅದಾಲತ್ ಕೂಡ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೂ ಕೂಡ ಇನ್ನೂ ಕೆಲವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಕ್ಕಿಲ್ಲ.
ಕರ್ನಾಟಕ ಸರಕಾರ ಗೃಹಿಣಿಯರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯ ಮೂಲಕ ಪ್ರತೀ ತಿಂಗಳು ಹಣವನ್ನು ವರ್ಗಾವಣೆ ಮಾಡುತ್ತಿದೆ. ವಾರ್ಷಿಕವಾಗಿ ಪ್ರತೀ ಕುಟುಂಬದ ಯಜಮಾನಿಗೆ 24000 ರೂಪಾಯಿಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯ ಲಾಭವನ್ನು ಈಗಾಗಲೇ ಕೋಟ್ಯಾಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ 5ನೇ ಕಂತಿನ ಹಣ ಬಿಡುಗಡೆಗೆ ಮೊದಲೇ ರಾಜ್ಯ ಸರಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಸರಕಾರ ಜಾರಿಗೆ ತಂದಿರುವ ರೂಲ್ಸ್ ಪಾಲನೆ ಮಾಡದೇ ಇದ್ರೆ ಮುಂದಿನ ಯಾವುದೇ ಕಂತಿನ ಹಣವೂ ನಿಮ್ಮ ಖಾತೆಗೆ ಜಮೆ ಆಗೋದಿಲ್ಲ. ಹಾಗಾದ್ರೆ ರಾಜ್ಯ ಸರಕಾರ ಜಾರಿಗೆ ತಂದಿರುವ ಹೊಸ ರೂಲ್ಸ್ ಯಾವುದು ಎಂದು ನೋಡೋಣಾ.
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಗೃಹಿಣಿಯರು ಕಡ್ಡಾಯವಾಗಿ ತಮ್ಮ ಖಾತೆಗೆ ಇ-ಕೆವೈಸಿ (Ekyc) ಮಾಡಿಸಲೇ ಬೇಕು. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಬೇಕಾದ್ರೆ ರೇಷನ್ ಕಾರ್ಡ್ನಲ್ಲಿ (Ration Card) ಇರುವ ಪ್ರತಿಯೊಬ್ಬ ಸದಸ್ಯರು ಕೂಡ ಈಕೆವೈಸಿ ಮಾಡಿಸಲೇಬೇಕಾಗಿದೆ.
ನಿಮ್ಮ ಬ್ಯಾಂಕ್ ಖಾತೆ ಇ-ಕೆವೈಸಿ ಆಗಿದೆಯೋ ಇಲ್ಲವೋ ಅನ್ನೋದನ್ನು ನೀವು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಅಷ್ಟಕ್ಕೂ ನೀವು ಮಾಡಬೇಕಾಗಿರುವುದು ಇಷ್ಟೆ. ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
ಹೋಮ್ ಪೇಜ್ನಲ್ಲಿ ನೀವು ಈ ಸ್ಥಿತಿಯನ್ನು ಆಯ್ಕೆ ಮಾಡಿದ ಬಳಿಕ ರೇಷನ್ ಕಾರ್ಡ್ ತಿದ್ದುಪಡಿ ಆಯ್ಕೆ ಗೋಚರಿಸುತ್ತದೆ. ನಂತರ ಅದರ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಹೊಸ ಪುಟ ಗೋಚರಿಸುತ್ತದೆ. ಅಲ್ಲದೇ ಅಲ್ಲಿ ಮೂರು ಲಿಂಕ್ಗಳು ಕಾಣಿಸುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಆ ಲಿಂಕ್ ಕ್ಲಿಕ್ ಮಾಡಿದ ಬಳಿಕ, ಜಿಲ್ಲೆಯನ್ನು ಕ್ಲಿಕ್ ಮಾಡಿ. ನಂತರ ಹೊಸ ಪುಟದ ತೆರೆಯುತ್ತಿದ್ದಂತೆಯೇ ನೀವು ಓಟಿಪಿ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
ಓಟಿಪಿ ಆಯ್ಕೆ ಮಾಡಿಕೊಂಡು, ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೋದಿಸಿದ್ರೆ, ನಿಮ್ಮ ಮೊಬೈಲ್ಗೆ ಒಟಿಪಿ ಬರಲಿದೆ. ಒಟಿಪಿ (OTP) ನಮೋದಿಸಿದ ನಂತರ ನಿಮ್ಮ ಕುಟುಂಬ ಸದಸ್ಯರ ಆಯ್ಕೆ ತೆರೆದುಕೊಳ್ಳಲಿದೆ. ಯಾವ ಸದಸ್ಯರ ಹೆಸರನ್ನು ಸೆಲೆಕ್ಟ್ ಮಾಡುತ್ತೇವೋ ಅವರ ಕೆವೈಸಿ ಆಗಿದೆಯೋ ಇಲ್ಲವೋ ಅನ್ನುವ ಮಾಹಿತಿ ಲಭ್ಯವಾಗಲಿದೆ.