ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ. ಅದೇ ರೀತಿ ಇಂಟರ್ನೆಟ್ ಅನ್ನು ಬಳಕೆ ಮಾಡುವವರು ಸಹ ಹೆಚ್ಚಾಗಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಇಂಟರ್ನೆಟ್ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ಮುಖ್ಯವಾಗಿ ಕಾಣುವ ಸಮಸ್ಯೆಯೆಂದರೆ ನೆಟ್ವರ್ಕ್ ಸಮಸ್ಯೆ. ಎಷ್ಟೇ ಡೇಟಾ ಪ್ಯಾಕ್ ಇದ್ದರೂ ಕೆಲವೊಮ್ಮೆ ಇಂಟರ್ನೆಟ್ ಸ್ಪೀಡ್ ಇರೋದೆ ಇಲ್ಲ
ಲಾಹೋರ್ ನಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಭಾರತ ಕಾರಣವಾ!? ಪಾಕ್ ಸಚಿವರ ಆರೋಪವೇನು!?
4G ಫೋನ್ನಲ್ಲಿ ಕೆಲವೊಂದು ಬಾರಿ ಸರಿಯಾಗಿ ರೀತಿಯಲ್ಲಿ ಅಥವಾ ವೇಗದ ಇಂಟರ್ನೆಟ್ ಸಿಗುವುದಿಲ್ಲ. ಇದಕ್ಕೆ ಕಾರಣವೇನು?. ಇದಕ್ಕೆಲ್ಲ ನಿಜವಾದ ಸಮಸ್ಯೆ ನಿಮ್ಮ ಫೋನ್ನಲ್ಲಿ ಅಡಗಿರುತ್ತದೆ. ಈ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ 4G ಫೋನ್ ಕೂಡ ಸೂಪರ್ಫಾಸ್ಟ್ 5G ಸ್ಪೀಡ್ನಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತದೆ.
ಫೋನ್ನಲ್ಲಿ ಇಂಟರ್ನೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ನೆಟ್ವರ್ಕ್ ಪರಿಶೀಲಿಸುವುದು ಬಹಳ ಮುಖ್ಯ. ವಿಶೇಷವಾಗಿ ನೀವು 4G ಹೊಂದಿದ್ದರೆ, ಆದರೆ ಸರಿಯಾಗಿ ನೆಟ್ವರ್ಕ್ ಇರದ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ನೆಟ್ವರ್ಕ್ ಬೂಸ್ಟರ್ ಅನ್ನು ಬಳಸುವುದು ಉತ್ತಮ ಆಯ್ಕೆ.
ಹಲವಾರು ಅನಗತ್ಯ ಅಪ್ಲಿಕೇಶನ್ಗಳು ಫೋನ್ ಮತ್ತು ಇಂಟರ್ನೆಟ್ ಎರಡರ ವೇಗವನ್ನೂ ನಿಧಾನಗೊಳಿಸುತ್ತದೆ. ಹಾಗಾಗಿ ಫೋನ್ನಲ್ಲಿ ನೀವು ದೀರ್ಘಕಾಲ ಬಳಸದ ಕೆಲವು ಅಪ್ಲಿಕೇಶನ್ಗಳಿದ್ದರೆ ಅದನ್ನು ಅನ್ಇನ್ಸ್ಟಾಲ್ ಮಾಡಿ. ಆಗ ಫೋನ್ನಲ್ಲಿ ನೆಟ್ವರ್ಕ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್ ತೆರವುಗೊಳಿಸುವುದು ಸಹ ಬಹಳ ಮುಖ್ಯ. ವಿಶೇಷವಾಗಿ ನಿಮ್ಮ ಫೋನ್ ಅತಿ ಕಡಿಮೆ ನೆಟ್ ಸ್ಪೀಡ್ ಹೊಂದಿದ್ದರೆ, ಫೋನ್ ಮೆಮೋರಿಯಲ್ಲಿ ಜಾಗ ಇಡಿ. ಇದು ಫೋನ್ ಅನ್ನು ವೇಗಗೊಳಿಸಲು ತುಂಬಾ ಸಹಾಯ ಮಾಡುತ್ತದೆ.
ಸ್ಮಾರ್ಟ್ಫೋನ್ ಅನ್ನು ಸರಿಯಾಗಿ ಅಪ್ಡೇಟ್ ಕೊಡುವುದು ಸಹ ಮುಖ್ಯವಾಗಿದೆ. ನೀವು ಸಮಯಕ್ಕೆ ಸರಿಯಾಗಿ ಅಪ್ಡೇಟ್ ಕೊಡಬೇಕು. ಹೀಗೆ ಮಾಡುವುದರಿಂದ ನಿಮ್ಮ 4G ಫೋನ್ ಕೂಡ 5G ತರಹದ ಇಂಟರ್ನೆಟ್ ಸ್ಪೀಡ್ನಲ್ಲಿ ಕೆಲಸ ಮಾಡುತ್ತದೆ
ಕೆಲ ತಜ್ಞರ ಪ್ರಕಾರ ಮೊಬೈಲ್ ಮೇಲೆ ರಕ್ಷಣೆಗೆ ಹಾಕುವ ಕವರ್ ಸಹ ಸಿಗ್ನಲ್ಗೆ ತೊಂದರೆ ಉಂಟುಮಾಡಿ ಇಂಟರ್ನೆಟ್ ನಿಧಾನವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಹಾಗಾಗಿ, ನೆಟ್ವರ್ಕ್ ಕ್ಷಿಣವಾಗಿರುವ ಪ್ರದೇಶದಲ್ಲಿ ಮೊಬೈಲ್ ಕವರ್ ತೆಗೆದು ಒಮ್ಮೆ ಟ್ರೈ ಮಾಡಿನೋಡಿ.