ಚಿಕ್ಕಮಗಳೂರು:– ಸಿ.ಟಿ ರವಿ ಅವರು ನನಗೆ ಆಕ್ಷೇಪಾರ್ಹ ಶಬ್ದ ಬಳಸಿಲ್ಲ ಎನ್ನುವುದಾದರೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಕಿದ್ದ ಸವಾಲಿಗೆ ಸಿಟಿ ರವಿ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ನನ್ನನ್ನು ಬಂಧಿಸಿದಾಗ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನನ್ನು ಕಾಪಾಡು ಎಂದು ಎಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ. ಹರಕೆ ತೀರಿಸಲು ಅಲ್ಲಿಗೆ ಹೋಗುತ್ತೇನೆ. ಇನ್ನೂ ಧರ್ಮಸ್ಥಳಕ್ಕೂ ಹೋಗುತ್ತೇನೆ ಎಂದರು.
ಸದನದಲ್ಲಿ ನಡೆದ ಘಟನೆಯ ವೇಳೆ ಹಾಗೂ ಸಿಸಿಟಿವಿ ವಿಡಿಯೋ ಎಲ್ಲಾ ಇದೆ. ಹಲ್ಲೆ ಮಾಡಿದವರು ಯಾರು ಅಪರಿಚಿತರಲ್ಲ. ಎಲ್ಲರೂ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಅವರ ಜೊತೆಗೆ ಇದ್ದವರೇ ಹಲ್ಲೆ ಮಾಡಿದ್ದು. ನಾನು ಕಳೆದ 19ರಂದು ದೂರು ನೀಡಿದ್ದೇನೆ. ಈವರೆಗೂ ಎಫ್ಐಆರ್ ಆಗಿಲ್ಲ ಎಂದರೆ ಕಮಿಷನರ್ ಅಮಾನತ್ತಾಗಬೇಕು ಎಂದು ಕಿಡಿಕಾರಿದ್ದಾರೆ