ನಿಮಗೆ ನೆನಪಿರಬಹುದು ಸಣ್ಣವಯಸ್ಸಿನಲ್ಲಿ ನಾವು ಶಾಲೆಗೆ ಹೋಗುತ್ತಿದ್ದಾಗ ಅಥವಾ ಆಟವಾಡುತ್ತಿದ್ದಾಗ ಎಲ್ಲಾದರೂ ಹುಣಸೆಹಣ್ಣಿನ ಮರ ಕಂಡರೆ ಅದರಿಂದ ಹುಣಸೆ ಹಣ್ಣು ಯಾವಾಗ ಕೆಳಗೆ ಬೀಳುತ್ತದೆ ಎಂದು ಕಾಯುತ್ತಿದ್ದೇವು. ಒಂದು ವೇಳೆ ಹುಣಸೆಹಣ್ಣು ಕೆಳಗೆ ಬಿದ್ದಿದ್ದರೆ ಅದನ್ನು ತಿನ್ನುತ್ತಾ ಶಾಲೆಗೆ ಹೋಗುತ್ತಿದ್ದೆವು. ಅದರಲ್ಲೂ ಮರದಲ್ಲಿ ಹುಣಸೆಹಣ್ಣುಗಳು ಕಾಣಿಸದಿದ್ದರೆ ಅದರ ಎಲೆಗಳನ್ನೇ ಕಿತ್ತುಕೊಂಡು ತಿನ್ನುತ್ತಾ,
ಮುಖ ಹುಳಿ ಹುಳಿಮಾಡುತ್ತಾ ಹೋಗುತ್ತಿದ್ದೆವು. ಹುಣಸೆ ಹಣ್ಣು ಇಲ್ಲದಿದ್ದರೆ ಅದರ ಎಲೆಯೇ ಸರಿ ಎಂದು ಅದನ್ನೇ ತಿನ್ನುತ್ತಾ ಹೋಗುತ್ತಿದ್ದೆವು. ಆದರೆ ಆಗ ನಮಗೆ ಹುಣಸೆ ಹಣ್ಣಿನ ಗುಣಗಳ ಬಗ್ಗೆ ತಿಳಿದಿರಲಿಲ್ಲ. ಬರೀ ಹುಳಿಯಾಗಿದೆ ಎನ್ನುವ ಕಾರಣಕ್ಕೆ ತಿನ್ನುತ್ತಿದ್ದೆವು. ಆದರೆ ನಾವಿಂದು ಹುಣಸೆ ಹಣ್ಣಿನ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
- ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಕಾಡುವ ನೋವು, ಸೆಳೆತವನ್ನು ಕಡಿಮೆ ಮಾಡಿಕೊಳ್ಳಲು ಹುಣಸೆ ಎಲೆಗಳನ್ನು ಸೇವಿಸುವುದು ಉತ್ತಮ. ಇಲ್ಲವಾದರೆ ಈ ಚಿಗುರೆಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಪರಿಣಾಮಕಾರಿ.
- ಈ ಹುಣಸೆ ಎಲೆಗಳನ್ನು ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
- ಕೀಲು ನೋವು ಹಾಗೂ ಮಂಡಿ ನೋವಿನಂತಹ ಸಮಸ್ಯೆಯಿದ್ದರೆ ಹುಣಸೆ ಎಲೆಗಳನ್ನು ನಿಯಮಿತವಾಗಿ ಸೇವಿಸಿದರೆ ನೋವು ಮಾಯಾವಾಗುತ್ತದೆ
- ಜಂತು ಹುಳು ಸಮಸ್ಯೆಯಿರುವವರು ನಿಯಮಿತವಾಗಿ ಹುಣಸೆ ಚಿಗುರೆಲೆ ಸೇವಿಸುತ್ತ ಬಂದರೆ ಈ ಸಮಸ್ಯೆಯು ದೂರವಾಗುತ್ತದೆ.
- ಎದೆ ಹಾಲು ಕಡಿಮೆಯಿದ್ದರೆ, ಹುಣಸೆ ಮರದ ಚಿಗುರೆಲೆಯಿಂದ ಕಷಾಯ ಮಾಡಿ ನಿಯಮಿತವಾಗಿ ಸೇವಿಸಿದರೆ ತಾಯಿಯ ಎದೆ ಹಾಲು ಉತ್ಪತ್ತಿಯಾಗುತ್ತದೆ.
- ದಿನನಿತ್ಯ ಈ ಹುಣಸೆಯ ಚಿಗುರೆಲೆಯನ್ನು ಸೇವಿಸುತ್ತಿದ್ದರೆ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆಯಾಗುತ್ತದೆ.
- ಮಲೇರಿಯಾಗೆ ಈ ಹುಣಸೆಯ ಚಿರುಗೆಲೆಯು ಉತ್ತಮವಾದ ಮನೆ ಮದ್ದಾಗಿದೆ.
- ಮೂತ್ರ ವಿಸರ್ಜನೆ ಮತ್ತು ಮಲಬದ್ಧತೆಯ ಸಮಸ್ಯೆಯಿರುವವರು ಈ ಎಲೆಯಿಂದ ಮಾಡಿದ ಕಷಾಯವನ್ನು ಸೇವಿಸಬಹುದು.
- ಹುಣಸೆ ಎಲೆ ಚಿಗುರನ್ನು ಒಣಗಿಸಿ ಪುಡಿಮಾಡಿ ನಿಂಬೆರಸದೊಂದಿಗೆ ನೋವು ಇದಲ್ಲಿ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
- ಈ ಮನೆ ಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆಯುವುದು ಉತ್ತಮ.