ಬೆಂಗಳೂರು: ರಾವಣ ಮಾತ್ರ ರಾಮ ವಿರೋಧಿ ಅಲ್ಲ. ಸಿದ್ದರಾಮಯ್ಯ ಕೂಡ ರಾಮ ವಿರೋಧಿ ಎನ್ನೋದನ್ನು ತೋರಿಸಿದ್ದಾರೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ರಾಮಜನ್ಮಭೂಮಿ ಹೋರಾಟಗಾರರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ,
ನಾನೂ ಕರಸೇವಕ, ನಿಮಗೆ ತಾಕತ್ ಇದ್ದರೆ ಕರಸೇವಕರ ಬಂಧನ ಮಾಡಿ. ಇನ್ನೂ ಕಾಲ ಮಿಂಚಿಲ್ಲ, ಬದ್ಧತೆ ಇದ್ರೆ ಹಿಂದುತ್ವದ ಮೇಲೆ ನಂಬಿಕೆ ಇದ್ರೆ ರಾಮಮಂದಿರ ಉದ್ಘಾಟನೆಗೆ ಬನ್ನಿ. ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೊಡುವ ಬದ್ಧತೆ ರಾಜ್ಯದ ಹಿಂದೂ ದೇವಾಲಯಗಳ ಅಭಿವೃದ್ಧಿ ಕಡೆಗೂ ತೋರಿಸಿ.
Sri Ram Mandir: ಅಯೋಧ್ಯೆ ಶ್ರೀರಾಮನ ಅಭಿಷೇಕಕ್ಕೆ ನೇಪಾಳದಿಂದ ಬರಲಿದೆ 16 ಪವಿತ್ರ ನದಿಗಳ ನೀರು..!
ರಾಜ್ಯದ ನೂರು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ಆದೇಶ ಹೊರಡಿಸಲಿ ಎಂದರು. ರಾವಣ ಮಾತ್ರ ರಾಮ ವಿರೋಧಿ ಅಲ್ಲ. ಸಿದ್ದರಾಮಯ್ಯ ಕೂಡ ರಾಮ ವಿರೋಧಿ ಎನ್ನೋದನ್ನು ತೋರಿಸಿದ್ದಾರೆ. ನಿಮ್ಮ ಸರ್ಕಾರಕ್ಕೆ ತಾಕತ್ ಇದ್ದರೆ, ಸಿದ್ದರಾಮಯ್ಯ ನಿಮಗೆ ತಾಕತ್ ಇದ್ದರೆ, ಕರ ಸೇವಕರ ಬಂಧನ ಮಾಡಿ. ನಾನು ಪಟ್ಟಿ ಕೊಡುತ್ತೇನೆ. ನಾನು ಕರ ಸೇವೆಯಲ್ಲಿ ಭಾಗಿಯಾಗಿದ್ದೆ. ತಾಕತ್ತಿದ್ದರೆ ಬಂಧನ ಮಾಡಿ. ಸಿದ್ದರಾಮಯ್ಯ ನಿಮಗೆ ನನ್ನ ಸವಾಲು ಎಂದಿದ್ದಾರೆ.