ಬೆಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರು ಎಷ್ಟು ಮಂದಿ ಇದ್ದಾರೋ, ಕಷ್ಟಪಟ್ಟು ತಿನ್ನುವವರೂ ಅಷ್ಟೇ ಮಂದಿ ಇದ್ದಾರೆ. ಇದನ್ನು ಬಳಸಿ ರುಚಿಕಟ್ಟಾಗಿ ಅಡುಗೆ ಮಾಡುವವರು ಇರುವಂತೆಯೇ, ಲೋಳೆಯ ಮುದ್ದೆ ಮಾಡಿಕೊಂಡು ಒದ್ದಾಡುವವರೂ ಇದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಾವಿಂದು ಹೇಳುವುದಕ್ಕೆ ಹೊರಟಿದ್ದು ಬೆಂಡೆಕಾಯಿಯೆಂಬ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಚಮತ್ಕಾರಿಯಾಗಿದೆ ಎಂದು ಹೇಳುತ್ತಾರೆ.
ಆ್ಯಂಟಿ ಆಕ್ಸಿಡೆಂಟ್ಗಳು ಹೇರಳ
ಬೆಂಡೆಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಹೇರಳವಾಗಿವೆ. ಇವು ಫ್ರೀ ರ್ಯಾಡಿಕಲ್ಸ್ಗಳನ್ನು ಕಡಿಮೆ ಮಾಡಿ, ಆಕ್ಸಿಡೇಟಿವ್ ಒತ್ತಡವನ್ನೂ ಇಳಿಸುವ ಜೊತೆಗೆ ಅಂಗಾಂಶ ಮಟ್ಟದಲ್ಲಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಇದರಿಂದ ಕ್ಯಾನ್ಸರ್, ಹೃದಯದ ಕಾಯಿಲೆ ಸೇರಿದಂತೆ ಮಾರಣಾಂತಿಕ ಕಾಯಿಲೆಗಳ ರಿಸ್ಕ್ ಕಡಿಮೆಯಾಗುತ್ತದೆ.
ಮಧುಮೇಹ ಕಾಯಿಲೆ ಹತೋಟಿ
ಬೆಂಡೆಕಾಯಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಸಕ್ಕರೆಯ ಹೀರಿಕೆಯನ್ನು ಇದು ತಡೆಯುತ್ತದೆ. ಪರಿಣಾಮವಾಗಿ ಮಧುಮೇಹದಂತಹ ಕಾಯಿಲೆ ಹತೋಟಿಗೆ ಬರುತ್ತದೆ.
ಜೀರ್ಣಕ್ರಿಯೆ ಆಗುವಲ್ಲಿ ಸಹಾಯ
ಜೀರ್ಣಾಂಗವ್ಯೂಹ ವ್ಯವಸ್ಥೆಗೆ ಬೆಂಡೆಕಾಯಿ ಒಳ್ಳೆಯದು. ಜೀರ್ಣಾಂಗನಾಳಗಳನ್ನು ಇದು ಸರಿಯಾಗಿಡುವ ಜೊತೆಗೆ, ಸಹಜವಾಗಿ ಜೀರ್ಣಕ್ರಿಯೆ ಆಗುವಲ್ಲಿ ಸಹಾಯ ಮಾಡುತ್ತದೆ.
ಕೊಲೆಸ್ಟೆರಾಲ್ ಕಡಿಮೆ ಮಾಡುತ್ತದೆ
ಬೆಂಡೆಕಾಯಿಯಲ್ಲಿರುವ ನಾರಿನಂಶ ಕೊಲೆಸ್ಟೆರಾಲ್ ಅನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕೊಲೆಸ್ಟೆರಾಲ್ ಕಡಿಮೆಯಾಗುವ ಮೂಲಕ ಸಹಜವಾಗಿಯೇ ಹೃದಯಕ್ಕೆ ಬೆಂಡೆಕಾಯಿ ಒಳ್ಳೆಯದನ್ನೇ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಚರ್ಮದ ಆರೋಗ್ಯಕ್ಕೆ ಬೆಂಡೆಕಾಯಿ ಬಹಳ ಒಳ್ಳೆಯದು. ಚರ್ಮಕ್ಕೆ ಬೇಕಾದ ನೀರಿನಂಶವನ್ನು ಇದು ನೀಡುವ ಮೂಲಕ ಸದಾ ಚರ್ಮವನ್ನು ನಯವಾಗಿ ಆರೋಗ್ಯವಾಗಿ ಇರಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಎ ಧಾರಾಳವಾಗಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊರಗಿನಿಂದ ದಾಳಿ ಮಾಡುವುದರ ವಿರುದ್ಧ ಪ್ರತಿದಾಳಿ ನಡೆಸಿ ದೇಹವನ್ನು ರೋಗ ಬರದಂತೆ ಕಾಪಾಡುತ್ತದೆ.
ಎಲುಬಿನ ಆರೋಗ್ಯಕ್ಕೆ ಒಳ್ಳೆಯದು
ಬೆಂಡೆಕಾಯಿಯಲ್ಲಿ ವಿಟಮಿನ್ ಕೆ ಹಾಗೂ ಕ್ಯಾಲ್ಸಿಯಂ ಇರುವುದರಿಂದ ಎಲುಬಿನ ಆರೋಗ್ಯಕ್ಕೆ ಇದು ಒಳ್ಳೆಯದನ್ನೇ ಮಾಡುತ್ತದೆ. ಎಲುಬಿನ ಸವೆತವಾಗದಂತೆ ತಡೆಯುತ್ತದೆ. ಹಾಗೂ ಎಲುಬಿನ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.