ಮುಂಬೈ: ದೇಶದ ಕಂಡ ವಿಶಿಷ್ಟ ಹಾಗೂ ಸಜ್ಜನ ಉದ್ಯಮಿ ರತನ್ ಟಾಟಾ ಅವರ ನಿಗರ್ಮನದೊಂದಿಗೆ ಒಂದು ಯುಗಾಂತ್ಯಗೊಂಡಿದೆ. ಟಾಟಾ ಕುಟುಂಬದ ಒಂದು ಅಮೂಲ್ಯ ಕೊಂಡಿ ಕಳಚಿಕೊಂಡಿದೆ. ಜೆಮ್ಶೆಡ್ಜಿ ಟಾಟಾ ಹುಟ್ಟುಹಾಕಿದ ಕಂಪೆನಿಯನ್ನು ಮುಗಿಲೆತ್ತರಕ್ಕೆ ಬೆಳೆಸುವಲ್ಲಿ ರತನ್ ಟಾಟಾ ಅವರ ಪಾತ್ರ ಹಿರಿದು.
ಈವರೆಗೂ ಟಾಟಾ ಸಮೂಹದ ಒಡೆತನ ಕುಟುಂಬದ ನಂತರದ ಪೀಳಿಗೆಗೆ ಸಹಜವಾಗಿಯೇ ವರ್ಗಾವಣೆ ಆಗುತ್ತಿತ್ತು. ರತನ್ ಟಾಟಾ ಅವಿವಾಹಿತರು. ಹೀಗಾಗಿ ಸಮೂಹದ ವಾರಸುದಾರಿಕೆ ಮುಂದುವರಿಸಲು ಅವರ ನಂತರದ ತಲೆಮಾರು ಇಲ್ಲ. ಸುಮಾರು 3,800 ಕೋಟಿ ರೂ ಮೌಲ್ಯದ ಕಂಪೆನಿಯನ್ನು ನಡೆಸುವ ಟಾಟಾ ಟ್ರಸ್ಟ್ನ ನಾಯಕತ್ವವನ್ನು ನೋಯೆಲ್ ಟಾಟಾ ನೇಮಕಗೊಂಡಿದ್ದಾರೆ.
ನೋಯೆಲ್ ಟಾಟಾ ಟಾಟಾ ಸ್ಟೀಲ್ ಮತ್ತು ವಾಚ್ ಕಂಪನಿ ಟೈಟಾನ್ನ ಉಪಾಧ್ಯಕ್ಷರಾಗಿದ್ದಾರೆ. ರತನ್ ಟಾಟಾ ಅವರ ಮಲತಾಯಿಯಾಗಿರುವ ಫ್ರೆಂಚ್-ಸ್ವಿಸ್ ಕ್ಯಾಥೋಲಿಕ್ ಅವರ ತಾಯಿ ಸಿಮೋನ್ ಟಾಟಾ ಅವರು ಪ್ರಸ್ತುತ ಟ್ರೆಂಟ್, ವೋಲ್ಟಾಸ್, ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಮತ್ತು ಟಾಟಾ ಇಂಟರ್ನ್ಯಾಶನಲ್ನ ಅಧ್ಯಕ್ಷರಾಗಿದ್ದಾರೆ.
ಯಾರು ಈ ನೊಯೆಲ್ ಟಾಟಾ?
ನೊಯೆಲ್ ಟಾಟಾ ಅವರು ಟಾಟಾ ಸ್ಟೀಲ್ ಕಂಪನಿ ಹಾಗೂ ವಾಚ್ ಕಂಪನಿ ಟೈಟಾನ್ನ ಉಪಾಧ್ಯಕ್ಷರಾಗಿದ್ದಾರೆ. ಟ್ರೆಂಟ್ನ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ವೋಲ್ಟಾಸ್ನ ಆಡಳಿತ ಮಂಡಳಿಯಲ್ಲೂ ಇದ್ದಾರೆ. ಅವರ ಮಕ್ಕಳಾದ ಮಾಯಾ, ನೆವಿಲ್ಲೆ, ಲೇಯ್ ಕೂಡ ಹಲವು ಕಂಪನಿಗಳ ಆಡಳಿತ ಮಂಡಳಿಯಲ್ಲಿ ಇದ್ದಾರೆ.
ಅವರ ತಾಯಿ, ಫ್ರೆಂಚ್-ಸ್ವಿಸ್ ಕ್ಯಾಥೋಲಿಕ್ ಆಗಿರುವ ಸಿಮೋನೆ ಟಾಟಾ ಅವರು ವೋಲ್ಟಾಸ್, ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಹಾಗೂ ಟಾಟಾ ಇಂಟರ್ನ್ಯಾಷನಲ್ನ ಅಧ್ಯಕ್ಷರಾಗಿದ್ದಾರೆ. ಟ್ರೆಂಟ್ ಅಧ್ಯಕ್ಷರೂ ಆಗಿದ್ದರು. 2014ರಿಂದ ನೊಯೆಲ್ ಟಾಟಾ ಇದರ ಅಧ್ಯಕ್ಷರಾಗಿದ್ದಾರೆ.
BIGG BREAKING: ಟಾಟಾ ಟ್ರಸ್ಟ್ನ ಹೊಸ ಅಧ್ಯಕ್ಷರನ್ನಾಗಿ ನೋಯೆಲ್ ಟಾಟಾ ನೇಮಕ!
ಬ್ರಿಟನ್ನ ಸಸೆಕ್ಸ್ ವಿವಿಯಲ್ಲಿ ಅಧ್ಯಯನ ನಡೆಸಿರುವ ನೊಯೆಲ್ ಟಾಟಾ, ಇನ್ಸೀಟ್ನಿಂದ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ.
ಹೊಸ ನೇಮಕಕ್ಕೂ ಮುನ್ನ ನೊಯೆಲ್ ಟಾಟಾ ಅವರು ಟಾಟಾ ಇಂಟರ್ನ್ಯಾಷನಲ್ ಲಿ.ನ ಎಂಡಿಯಾಗಿದ್ದರು. ಇದು ಟಾಟಾ ಸಮೂಹದ ಟ್ರೇಡಿಂಗ್ ಮತ್ತು ಡಿಸ್ಟ್ರಿಬ್ಯೂಷನ್ ಘಟಕವಾಗಿದೆ. 2010ರಲ್ಲಿ ಕೇವಲ 500 ಮಿಲಿಯನ್ ಡಾಲರ್ ಇದ್ದ ಇದರ ವಹಿವಾಟು, 2021ರಲ್ಲಿ 3 ಬಿಲಿಯನ್ ಡಾಲರ್ಗೆ ಏರಿಕೆ ಕಂಡಿತ್ತು. ಈ ಮೂಲಕ ಅವರು ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದರು.
ಟಾಟಾದ ಚಿಲ್ಲರೆ ಮಾರಾಟ ವಿಭಾಗ ಟ್ರೆಂಟ್ ಎಂಡಿಯಾಗಿ 1998ರಲ್ಲಿ ಕೇವಲ ಒಂದು ಮಳಿಗೆ ಹೊಂದಿದ್ದ ವಿಭಾಗವನ್ನು ಇಂದು ದೇಶಾದ್ಯಂತ 700ಕ್ಕೂ ಹೆಚ್ಚು ಮಳಿಗೆ ಇರುವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. 2014ರಿಂದ ಇದರ ಅಧ್ಯಕ್ಷರಾಗಿದ್ದಾರೆ. ಅಲ್ಲಿಂದ ಇಲ್ಲಿವರೆಗೆ 10 ವರ್ಷಗಳಲ್ಲಿ ಕಂಪನಿ ಷೇರುಗಳು ಶೇ. 6000ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.