ಎಲೆಕ್ಷನ್ ಕ್ಯಾಂಪೇನ್ಗೆ ನನ್ನ ಯಾರು ಕರೆಯೋದಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.
ಸಾಮಾನ್ಯವಾಗಿ ಕ್ಯಾಂಪೇನ್ಗೆ ನನ್ನನ್ನು ಯಾರೂ ಕರೆಯುವುದಿಲ್ಲ. ಅವರಿಗೆ ನನ್ನ ಜಾತಿ ಅಡ್ಡ ಬರುತ್ತದೆ ಎನಿಸುತ್ತದೆ. ಅದು ನನಗೆ ಗೊತ್ತಿಲ್ಲ. ಒಂದು ವೇಳೆ ಪ್ರಚಾರಕ್ಕೆ ಕರೆದರೆ ನಾನು ಸ್ನೇಹಿತರಿಗೆ ಇಲ್ಲ ಅಂತ ಹೇಳಲ್ಲ. ನನಗೆ ಯಾವುದೇ ಅಭ್ಯಂತರ ಇಲ್ಲ.
ಆದರೆ ಯಾವುದೇ ಪಕ್ಷಕ್ಕೆ ನಾನು ಅಂಟಿಕೊಳ್ಳಲ್ಲ. ನನ್ನದು ಕಾಮನ್ ಪಾರ್ಟಿ. ಪ್ರಚಾರಕ್ಕೆ ಹೋಗುವ ಐಡಿಯಾ ಇರಲ್ಲ. ಬೇರೆ ವಿಚಾರಗಳ ಮೇಲೂ ಅದು ಅವಲಂಬಿತ ಆಗಿರುತ್ತೆ’ ಎಂದು ರವಿಚಂದ್ರನ್ ಹೇಳಿದ್ದಾರೆ.