ಹುಬ್ಬಳ್ಳಿ: ಪಾಲಿಕೆ ಆಯುಕ್ತರ ವರ್ಗಾವಣೆ ಬೇಡ ಎಂದು ಹುಬ್ಬಳ್ಳಿಯಲ್ಲಿ ಹೋರಾಟಗಾರ ರಾಜು ಸಾ ನಾಯಕವಾಡಿ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿಅವರನ್ನು ನಿಯುಕ್ತಿಗೊಳಿಸುವಂತೆ ವಾರ್ಡ್ ನಂಬರ್ 53ರ ಪಾಲಿಕೆ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಸರಿಯಲ್ಲ, ಈಶ್ವರ ಉಳ್ಳಾಗಡ್ಡಿ ಅವರು ಇತ್ತೀಚಿಗೆ ಬಂದವರು ಉತ್ತಮ ಕೆಲಸ ಮಾಡುತಿದ್ದಾರೆ.
ಪಾಲಿಕೆಗೆ ಈಶ್ವರ ಉಳ್ಳಾಗಡ್ಡಿ ಅವರು ವರ್ಗಾವಣೆ ಆಗಿ ಬಂದ ನಂತರ ಸಾಕಷ್ಟು ಕೆಲಸ ಮಾಡುತಿದ್ದಾರೆ. ಯಾರೂ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಒಳ್ಳೆಯ ಅಧಿಕಾರಿಗಳನ್ನ ವರ್ಗಾವಣೆ ಮಾಡುವುದು ಸರಿಯಲ್ಲ, ಅನಗತ್ಯವಾಗಿ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ, ಒಂದು ವೇಳೆ ಸರಕಾರ ಅಥವಾ ಹಿರಿಯ ಅಧಿಕಾರಿಗಳು ವರ್ಗಾವಣೆಗೆ ಮುಂದಾದರೆ ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದ್ದಾರೆ.