ಬೆಂಗಳೂರು:- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಟ್ಯಾಕ್ಸಿ ಸಿಗದೇ ಪ್ರಯಾಣಿಕರು ಪರದಾಟ ನಡೆಸಿರುವ ಘಟನೆ ಜರುಗಿದೆ.
ಮಹಾರಾಷ್ಟ್ರ: ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಕಾರಿನ ಮೇಲೆ ಕಲ್ಲು ತೂರಾಟ!
ಏರ್ಪೋರ್ಟ್ನಿಂದ ನಿತ್ಯ ಸಾವಿರಾರು ಜನ ಕ್ಯಾಬ್ಗಳ ಮೂಲಕವೇ ಸಂಚರಿಸುತ್ತಿದ್ದು, ಕಡಿಮೆ ಬೆಲೆಗೆ ಸಿಗುವ ಆ್ಯಪ್ ಆಧಾರಿತ ಕ್ಯಾಬ್ಳಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಮೊದಲೆಲ್ಲ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಕ್ಯಾಬ್ಗಳು ಏರ್ಪೋರ್ಟ್ಗೆ ಬರುತ್ತಿದ್ದವು. ಆದರೆ, ಕಳೆದ ಒಂದು ತಿಂಗಳಿಂದ ಮಾತ್ರ ಕ್ಯಾಬ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ ನಿತ್ಯ ದೇಶ-ವಿದೇಶಗಳಿಂದ ಬರುವ ಸಾವಿರಾರು ಜನ ಪ್ರಯಾಣಿಕರು ಎರ್ಪೋರ್ಟ್ನಿಂದ ಸಿಲಿಕಾನ್ ಸಿಟಿಗೆ ತೆರಳಲು ಪರದಾಡುವಂತಾಗಿದೆ.
ಭಾನುವಾರ ಮತ್ತು ಸೋಮವಾರ ಇತರೆ ರಾಜ್ಯಗಳಿಗೆ ತೆರಳಿದ್ದ ಪ್ರಯಾಣಿಕರು ರಾತ್ರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕ್ಯಾಬ್ಗಳಿಲ್ಲದೆ ಗಂಟ್ಟೆಗಟ್ಟಲೆ ಸರದಿಯಲ್ಲಿ ನಿಂತು ಪರದಾಡಿದರು. ಟ್ಯಾಕ್ಸಿ ಬುಕ್ ಮಾಡೋಣ ಅಂದರೆ, ಬುಕ್ಕಿಂಗ್ ಸಹ ಆಗುತ್ತಿರಲಿಲ್ಲ. ಟ್ಯಾಕ್ಸಿ ನಂಬಿಕೊಂಡು ಬಂದಾಗ ಈ ರೀತಿಯಾದರೆ ಏನು ಮಾಡುವುದು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಟ್ಯಾಕ್ಸಿಗಳ ಕೊರತೆ ಶುರುವಾಗಲು ಕಾರಣ ಚಾಲಕರು ಮತ್ತು ಆ್ಯಪ್ ಆಧಾರಿತ ಕೆಲ ಸಂಸ್ಥೆಗಳ ನಡುವಿನ ಶೀತಲ ಸಮರ ಎನ್ನಲಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಟ್ಯಾಕ್ಸಿಗಳಿಗೆ ಕೆಲ ಆ್ಯಪ್ ಆಧಾರಿತ ಸಂಸ್ಥೆಗಳು ಪ್ರಯಾಣಿಕರಿಂದ ಟ್ರಿಪ್ಗೆ ಪಡೆಯುವ ಹಣದಲ್ಲಿ ಸಿಂಹಪಾಲನ್ನು ತಾವೇ ಪಡೆದು ಅಲ್ಪ ಸ್ವಲ್ಪ ಹಣವನ್ನು ಚಾಲಕರಿಗೆ ನೀಡುತ್ತಿವೆಯಂತೆ. ಇದರಿಂದಾಗಿ ನಿರ್ವಹಣೆ ಕಷ್ಟವಾಗುತ್ತಿವೆ ಎಂದು ಶೇ 30 ರಷ್ಟು ಕ್ಯಾಬ್ಗಳು ವಾರಾಂತ್ಯದಲ್ಲಿ ವಿಮಾನ ನಿಲ್ದಾಣಕ್ಕೆ ಬರುವುದನ್ನೇ ನಿಲ್ಲಿಸಿವೆ.