ಬೆಂಗಳೂರು:- CM ಪುತ್ರ ವರ್ಗಾವಣೆ ಬಗ್ಗೆ ಮಾತನಾಡಿಲ್ಲ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವರುಣಾ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ನಡೆದ ದೂರವಾಣಿ ಮಾತುಕತೆಯನ್ನು ವರ್ಗಾವಣೆಯದ್ದು ಎಂದು ಕಲ್ಪಿಸಿಕೊಂಡು ಹೆಚ್ ಡಿ ಕುಮಾರಸ್ವಾಮಿ ಅವರು ಆರೋಪ ಮಾಡಿರುವುದು ಮಾಜಿ ಮುಖ್ಯಮಂತ್ರಿಯಾದ ಅವರಿಗೆ ಶೋಭೆ ತರಲ್ಲ.

ಇದೊಂದು ಹಳೆಯ ಕ್ಲಿಪಿಂಗ್. ವರ್ಗಾವಣೆ ಸಂಬಂಧ ಯಾವುದೇ ಮಾತು ಆಡಿಲ್ಲ. ಶಾಲೆಗಳ ಅಭಿವೃದ್ಧಿಗೆ ಸೀಮಿತವಾಗಿ ಮಾತನಾಡಿದ್ದಾರೆ. ಆದರೂ ಅದನ್ನೇ ರಾಜಕೀಯವಾಗಿ ಬಳಸಿಕೊಂಡು ಇಲ್ಲ ಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ತಮ್ಮ ಮೇಲಿನ ವಿವಾದದ ಗಮನ ಬೇರೆಡೆ ಸೆಳೆಯಲು ಯತೀಂದ್ರ ವಿಚಾರ ಎಳೆದು ತಂದಿದ್ದಾರೆ ಎಂದು ದೂರಿದ್ದಾರೆ.
ರಾಜಕಾರಣದಲ್ಲಿ ಸತ್ಯಾಂಶ ಇದ್ದರೆ, ದಾಖಲೆ ಸಮೇತ ಆರೋಪ ಮಾಡಲಿ. ಅದು ಬಿಟ್ಟು ಹತಾಶರಾಗಿ ಕಥೆ ಕಟ್ಟಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಹೇಳಿದ್ದಾರೆ

