ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಸೌರವ್ ಗಂಗೂಲಿ ಅವರೇ ಕಾರಣ ಎನ್ನುವಂತಹ ಹಲವು ವರದಿಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದವು. ಆದರೆ ಈ ವಿಚಾರದ ಕುರಿತಂತೆ ಸೌರವ್ ಗಂಗೂಲಿ ಮೌನ ಮುರಿದಿದ್ದು, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವುದರ ಹಿಂದೆ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಿಲ್ಲ. ನಾನು ಈ ವಿಚಾರವನ್ನು ಹಲವಾರು ಬಾರಿ ಹೇಳಿದ್ದೇನೆ. ವಿರಾಟ್ ಕೊಹ್ಲಿ ಟಿ20 ತಂಡವನ್ನು ಮುನ್ನಡೆಸಲು ಆಸಕ್ತರಾಗಿರಲಿಲ್ಲ. ಇದು ಅವರದ್ದೇ ತೀರ್ಮಾನವಾಗಿತ್ತು. ನಾನು ಆಗ, ನೀವು ಒಂದು ವೇಳೆ ಟಿ20 ನಾಯಕತ್ವ ವಹಿಸಲು ಆಸಕ್ತಿ ಇಲ್ಲ ಎಂದಾದರೇ, ಸೀಮಿತ ಓವರ್ಗಳ ನಾಯಕತ್ವದಿಂದ ಕೆಳಗಿಳಿಯುವುದೇ ಒಳಿತು ಎಂದು ಹೇಳಿದ್ದೆ. ವೈಟ್ ಬಾಲ್ ಕ್ರಿಕೆಟ್ಗೆ ಹಾಗೂ ರೆಡ್ ಬಾಲ್ ಕ್ರಿಕೆಟ್ಗೆ ಬೇರೆ ಬೇರೆ ನಾಯಕರಿರಲಿ ಎನ್ನುವ ಉದ್ದೇಶದಿಂದ ನಾನು ಹಾಗೆ ಹೇಳಿದ್ದೆ” ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ತೆಲಂಗಾಣದ 2ನೇ ಮುಖ್ಯಮಂತ್ರಿ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ
“ನಾನು ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲು ಸ್ವಲ್ಪ ಒತ್ತಡ ಹೇರಿದೆ. ಯಾಕೆಂದರೆ ರೋಹಿತ್ ಮೂರು ಮಾದರಿಯಲ್ಲಿ ಭಾರತ ತಂಡದ ನಾಯಕರಾಗಲು ಮನಸ್ಸಿರಲಿಲ್ಲ. ರೋಹಿತ್ ನಾಯಕರಾದ ವಿಚಾರದಲ್ಲಿ ನನ್ನದೂ ಕೊಡುಗೆ ಸ್ವಲ್ಪ ಇರಬಹುದು. ಆದರೆ ಯಾರೇ ಆಡಳಿತ ನಡೆಸಲಿ, ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಹೊರಗಿನ ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.