ಬೆಂಗಳೂರು: ನನ್ನ ಹಾಗೂ ಸಿಎಂ ಸಿದ್ದರಾಮಯ್ಯನವರ (Siddaramaiah) ನಡುವೆ ಯಾವುದೇ ಅಸಮಾಧಾನ ಇಲ್ಲ. ಅವರಿಗೆ ಅದೃಷ್ಟ ಇದೆ ಸಿಎಂ ಆಗಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಗುದ್ದಾಟ ಇಲ್ಲ. ನನ್ನನ್ನು ಯಾರೂ ಮೂಲೆಗುಂಪು ಮಾಡಲು ಆಗುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (B.K Hariprasad) ಹೇಳಿದ್ದಾರೆ.
ಬಾಡಿಗೆ ಬೈಕ್’ನಲ್ಲಿ 330km ಪ್ರಯಾಣಿಸಿ ವಿಧಾನಸಭೆಗೆ ತೆರಳಿದ ಜನಪ್ರತಿನಿಧಿ!
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನನ್ನು ಯಾರು ತುಳಿಯುದಕ್ಕೆ ಆಗುವುದಿಲ್ಲ. ತುಳಿಯುವ ಪ್ರಯತ್ನ ಮಾಡಿದರೆ ಅದು ಅವರಿಗೆ ರಿವರ್ಸ್ ಆಗಿ ತಿರುಗುತ್ತದೆ. ನಮ್ಮ ಸಮುದಾಯದಲ್ಲಿ ನನ್ನ ಪರವಾಗಿ ಪರ್ಯಾಯ ನಾಯಕರನ್ನು ಬೆಳೆಸುವ ಪ್ರಕ್ರಿಯೆ ನಿರಂತರವಾಗಿದೆ. ನಾನು ಯಾವುದಕ್ಕೂ ಬಗ್ಗುವುದಿಲ್ಲ. ಯಾರು ತಂತ್ರ ಹಾಗೂ ಕುತಂತ್ರ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.