ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಕೃಷಿ ಸಚಿವ ಚೆಲುವರಾಸ್ವಾಮಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ. ಈ ನಡುವೆ ಅನಗತ್ಯವಾದ ಚರ್ಚೆ ಬೇಡ ಎಂದ ಅವರು, ಎಐಸಿಸಿ, ಮಂತ್ರಿಮಂಡಲ ಈ ಬಗ್ಗೆ ಸ್ಪಷ್ಟತೆ ನೀಡಿದ್ದು, ಸಿಎಂ ರಾಜೀನಾಮೆ ನೀಡುವಂತೆ ಎಐಸಿಸಿ ಕೇಳಿಯೂ ಇಲ್ಲ, ಸಧ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಇದೆಲ್ಲ ಕೇವಲ ಊಹಾಪೋಹವಷ್ಟೇ ಎಂದರು.
ಇನ್ನೂ ಬಿಜೆಪಿಯವರು ಒಂದು ಬಾರಿಯೂ 113 ಸ್ಥಾನದಾಟಿಲ್ಲ. ಬಿಜೆಪಿಯವರು ಯಾವಾಗಾದ್ರೂ ಐದು ವರ್ಷ ಅಧಿಕಾರ ನಡೆಸಿರುವ ಉದಾಹರಣೆ ಇದೆಯಾ..? ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರೋ ಸರ್ಕಾರ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ ಅಧಿಕಾರ ಸಿಕ್ಕಾಗ ಬಿಜೆಪಿಯವರು ಸರಿಯಾಗಿ ಅಧಿಕಾರ ಮಾಡಲ್ಲ. ಅಧಿಕಾರ ಕಳೆದುಕೊಂಡಾಗ ಅಧಿಕಾರ ಬೇಕು ಅಂತಾರೆ ಆದರೆ ಈಗ ನಮ್ಮಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ಜಾತಿ ಜನಗಣತಿ ವಿಚಾರವಾಗಿ ಸ್ವಪಕ್ಷದಲ್ಲೇ ಅಪಸ್ವರ ವಿಚಾರವಾಗಿ ಮಾತನಾಡಿ, ಜಾತಿ ಗಣತಿ ವಿಚಾರದ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಮುಕ್ತವಾಗಿ ಚರ್ಚೆ ನಡೆಯಲಿದೆ. ಜಾತಿ ಜನಗಣತಿ ಹಳೆಯದಾಗಿದ್ದರಿಂದ ಕೆಲವೊಬ್ಬರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕೆಲವೊಬ್ಬರು ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಈ ಸಮೀತಿಯಲ್ಲಿ ಚರ್ಚೆಯಾದ ನಂತರ ನಿರ್ಧಾರ ಮಾಡುತ್ತಾರೆ ಎಂದರು.