ಹುಬ್ಬಳ್ಳಿ:– ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ತಾನಾಗಲೀ, ತನ್ನ ಪಕ್ಷವಾಗಲೀ ಅಥವಾ ಪ್ರಧಾನ ಮಂತ್ರಿಯವರೇ ಆಗಲಿ, ರಾಜಕೀಯದಲ್ಲಿ ಯಾರನ್ನೂ ಶತ್ರುಗಳೆಂದು ಭಾವಿಸುವುದಿಲ್ಲ ಎಂದರು.
ರಾಜಕೀಯ ಬದುಕಿನಲ್ಲಿ ತನಗೆ ಮಾಜಿ ಪ್ರಧಾನ ಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಒಡನಾಟದ ಸುಯೋಗ ಸಿಕ್ಕಿತ್ತು, ಅವರು ಯಾವತ್ತೂ ತಮ್ಮ ಎದುರಾಳಿಗಳನ್ನು ಶತ್ರುಗಳೆಂದು ಪರಿಗಣಿಸುತ್ತಿರಲಿಲ್ಲ, ಅದನ್ನೇ ತಾವು ಅವರಿಂದ ಕಲಿತಿದ್ದು, ಪ್ರಜಾಪ್ರಭುತ್ವ ಇರುವ ಭಾರತ ಮತ್ತು ಇಂಗ್ಲೆಂಡ್ನಂಥ ದೇಶಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳಿರುತ್ತವೆ, ಪ್ರತಿ ಅಂದರೆ ಶತ್ರುವಲ್ಲ ಎಂದರು.