ಬೆಂಗಳೂರು: ಸಂಸದ ಪ್ರತಾಪ್ಸಿಂಹಗೆ ಟಿಕೆಟ್ ಕೈ ತಪ್ಪುವ ವಿಚಾರ ಬಗ್ಗೆ ಮಾಜಿ ಸಚಿವ, ಎಂಎಲ್ಸಿ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಾಪ್ ಸಿಂಹ ಮೈಸೂರು ಕೊಡಗಿನ ಸಂಸದರಾಗಿ ಕೆಲಸ ಮಾಡಿದ್ದಾರೆಪಕ್ಷ ಯಾವುದೇ ಇದ್ರೂ ಕೆಲಸ ಮಾಡಿದ್ದಾರೆ ನಮ್ಮ ಕೆಲಸಕ್ಕಿಂತ ಹೆಚ್ಚಾಗಿ ನಮ್ಮ ನಡವಳಿಕೆ ಜನ ಗಮನಿಸ್ತಾರೆ ಪ್ರತಾಪ್ಸಿಂಹಗೆ ಅವರ ಹೇಳಿಕೆಗಳು, ನಡವಳಿಕೆಗಳೇ ಮುಳುವಾದವು
Lok Sabha Elections 2024: ಪ್ರಧಾನಿ ಮೋದಿ ಕರ್ನಾಟಕ ಭೇಟಿಗೆ ದಿನಾಂಕ ಫಿಕ್ಸ್: ಈ ಕ್ಷೇತ್ರಗಳೇ ಬಿಗ್ ಟಾರ್ಗೆಟ್!
ಮೈಸೂರು ಮಹರಾಜರಾಗಿ ಒಂದು ಪಟ್ಟು ಜಾಸ್ತಿ ಕೆಲಸ ಮಾಡಿದ್ದೀನಿ ಅಂದ್ರು ಮಹರಾಜರು ಎಲ್ಲಿ, ಪ್ರತಾಪ್ ಸಿಂಹ ಎಲ್ಲಿ ನಾನೇ ಬುದ್ದಿವಂತ, ನಾನೆ ಮೇಲೂ ಎಂಬ ದುರಂಕಾರದ ಹೇಳಿಕೆಗಳಿಂದ ಟಿಕೆಟ್ ಮಿಸ್ ಆಗಿರಬಹುದು ಜನರಿಗೆ ವಿರೋಧಿ ಅಂತಾ ಕಂಡಾಗ ಪರಿಣಾಮ ಬೇರೆಯದ್ದೇ ಆಗುತ್ತೆ
ನಿನ್ನೆ ಕಣ್ಣೀರು ಹಾಕಿದ್ದಾರೆ, ನೋವಾಗಿರಬಹುದು ಯದುವಂಶದವರು, ಅರಸರು ಅಗಲಿದರೂ ಅವರ ಕೆಲಸ ಅಜರಾಮರ ಅನ್ನ, ನೀರು, ಶಿಕ್ಷಣ ಎಲ್ಲಾ ಅರಸರು ಕೊಟ್ಟಿದ್ರು
ಯದುವೀರ್ ಅವ್ರನ್ನ ಅಭ್ಯರ್ಥಿ ಮಾಡ್ತಾರೆ ಅರಮನೆಯಿಂದ ಬಂದೋರು ಇದೂವರೆಗೂ ಯಾರೂ ಗೆದ್ದಿಲ್ಲ ಜನತಂತ್ರದಲ್ಲಿ ರಾಜಮನೆತನವನ್ನ ಸಾಮಾನ್ಯ ಮನೆಯಂತೆ ಇಂದಿರಾಗಾಂಧಿ ಇಟ್ಟಿದ್ರು ಶ್ರೀಕಂಠದತ್ತ ಒಡೆಯರ್ ಕಾಂಗ್ರೆಸ್ ನಿಂದ ಎರಡು ಬಾರಿ ಗೆದ್ದಿದ್ರು ಆದ್ರೆ ಬಿಜೆಪಿ ಪಕ್ಷದಿಂದ ಸೋತಿದ್ರು ಈಗಲೂ ಕೂಡ ಯದುವೀರ್ ಗೆ ಅಷ್ಟು ಸುಲಭವಲ್ಲ ಬಿಜೆಪಿಯಿಂದ ಯಧುವೀರ್ ಗೆಲುವು ಸುಲಭವಲ್ಲ ಎಂದ ಹಳ್ಳಿಹಕ್ಕಿ