ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರನ್ ಅವರು ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 800 ವಿಕೆಟ್ಗಳನ್ನು ಹೊಂದಿರುವ ಮುರಳಿಧರನ್, ದೀರ್ಘಾವಧಿ ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಅಂದ ಹಾಗೆ ನನ್ನ ಟೆಸ್ಟ್ ಕ್ರಿಕೆಟ್ ವಿಕೆಟ್ಗಳ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುರಳಿಧರನ್ ಹೇಳಿದ್ದಾರೆ
ಡೈಲಿ ಮೇಲ್ ಜೊತೆ ಮತನಾಡಿದ ಮುತ್ತಯ್ಯ ಮುರಳಿಧರನ್ ಮಾತನಾಡಿ, “ಟೆಸ್ಟ್ ಕ್ರಿಕೆಟ್ ಬಗ್ಗೆ ತುಂಬಾ ಬೇಸರವಾಗಿದೆ. ಪ್ರತಿಯೊಂದು ದೇಶ 6 ಅಥವಾ 7 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡುತ್ತಿವೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಆಷಸ್ ಟೆಸ್ಟ್ ಸರಣಿ ಆಡಲಿವೆ. ಇನ್ನುಳಿದ ದೇಶಗಳ ಕನಿಷ್ಠ ಟೆಸ್ಟ್ ಪಂದ್ಯಗಳನ್ನು ಕೂಡ ನೋಡುವುದಿಲ್ಲ. ಅಲ್ಲದೆ ಟೆಸ್ಟ್ ಕ್ರಿಕೆಟ್ ತುಂಬಾ ಕಡಿಮೆಯಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುತ್ತಯ್ಯ ಮುರಳಿಧರನ್ ಅವರು, ನನ್ನ ಟೆಸ್ಟ್ ವಿಕೆಟ್ಗಳ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಶ್ರೀಲಂಕಾ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಅವರು ತಮ್ಮ 20 ವರ್ಷಗಳ ಟೆಸ್ಟ್ ವೃತ್ತಿ ಜೀವನದಲ್ಲಿ 800 ವಿಕೆಟ್ಗಳನ್ನು ಕಬಳಿಸಿದ್ದಾರೆ.