ರಾಜಕೀಯ ಬಿಕ್ಕಟ್ಟಿನ ಕಾರಣ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜನೆ ಆಗುತ್ತಿಲ್ಲ. ಇತ್ತಂಡಗಳು 2008ರ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿ ಆಗಿಲ್ಲ. ಇನ್ನು 2012-13ರ ಬಳಿಕ ಯಾವುದೇ ವೈಟ್ ಬಾಲ್ ಕ್ರಿಕೆಟ್ ಸರಣಿಯಲ್ಲೂ ಪಾಲ್ಗೊಂಡಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಗಳಿಗೆ ಇರುವ ಭಾರಿ ಬೇಡಿಕೆಯನ್ನು ಬಳಕೆಮಾಡಿಕೊಳ್ಳುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಪ್ರತಿ ಟೂರ್ನಿಗಳ ಆರಂಭಿಕ ಲೀಗ್ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಒಂದು ಫಿಕ್ಸ್ ಪಂದ್ಯವನ್ನು ಆಯೋಜಿಸುವ ತಂತ್ರ ಅಳವಡಿಸಿಕೊಂಡಿದೆ.
ಐಸಿಸಿ ತನ್ನ ವೇಳಾ ಪಟ್ಟಿ ಪ್ರಕಟಿಸಿದ ಮರು ಕ್ಷಣವೇ ಈ ಪಂದ್ಯದ ಟಿಕೆಟ್ಗಳ ಸಲುವಾಗಿ ಭಾರಿ ಬೇಡಿಕೆ ಬರುತ್ತದೆ. ಟಿಕೆಟ್ ದರದ 50-100 ಪಟ್ಟು ದುಬಾರಿ ಬೆಲೆ ನೀಡಿ ಪಂದ್ಯ ಲೈವ್ ವೀಕ್ಷಣೆಗೆ ಪ್ರೇಕ್ಷಕರು ಮುಂದಾಗಿರುವ ಉದಾಹರಣೆಗಳು ಕೂಡ ಇದೆ. ಇನ್ನು ಬದ್ಧ ಎದುರಾಳಿಗಳ ನಡುವಣ ಕ್ರಿಕೆಟ್ ಕಾಳಗ ವೀಕ್ಷಣೆಗೆ ಪ್ರಸಾರ ಹಕ್ಕಿನಿಂದ ಮತ್ತು ಜಾಹೀರಾತಿನಿಂದಲೂ ಐಸಿಸಿಗೆ ಹಣದ ಹೋಳೆ ಹರಿಯುತ್ತಿದೆ. ಆದರೆ, ಈ ರೀತಿ ಪ್ರತಿ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳಿಗಾಗಿ ಮೀಸಲಿಡುವುದನ್ನು ಐಸಿಸಿ ಮೊದಲ ನಿಲ್ಲಿಸಬೇಕು ಎಂದು ಇಂಗ್ಲೆಂಡ್ನ ಮಾಜಿ ಆಟಗಾರ ಡೇವಿಡ್ ಲಾಯ್ಡ್ ತಾಕೀತು ಮಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ದರ್ಶನ್ ಜೊತೆ ಈ ಸ್ಟಾರ್ ನಟಿಗೂ ಇತ್ತಾ ಸಂಬಂಧ..? ಸ್ಫೊಟಕ ಮಾಹಿತಿ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್
ಟಾಕ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಡೇವಿಡ್ ಲಾಯ್ಡ್ ಈ ಮಾದರಿ ಟೂರ್ನಿಗಳಲ್ಲಿ ಕೆಲವೇ ತಂಡಗಳಿಗೆ ಫಿಕ್ಸ್ ಪಂದ್ಯಗಳನ್ನು ನೀಡುವುದನ್ನು ತಾವು ಖಂಡಿಸುವುದಾಗಿ ಹೇಳಿಕೊಂಡಿದ್ದಾರೆ. “ಸ್ವತಂತ್ರವಾಗಿ ಟೂರ್ನಿಯ ಪಂದ್ಯಗಳನ್ನು ನಿಗದಿ ಪಡಬೇಕು. ಕ್ರಿಕೆಟ್ನಲ್ಲಿ ಫಿಕ್ಸ್ ಪಂದ್ಯಗಳು ಇರಬಾರದು. ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲೆಂದೇ ಇಂದು ಐಸಿಸಿ ಈ ಮಾದರಿಯ ಫಿಕ್ಸ್ ಪಂದ್ಯಗಳನ್ನು ಆಯೋಜಿಸುತ್ತಿದೆ. ಇದು ನಡೆ ಸರಿಯಲ್ಲ.
ವೇಳಾಪಟ್ಟಿಯನ್ನು ಈ ರೀತಿ ನಿಗದಿಪಡಿಸಬಾರದು. ಸ್ವಾಭಾವಿಕವಾಗಿಯೇ ಪಂದ್ಯಗಳನ್ನು ಆಯೋಜಿಸಿ. ಇದರಿಂದ ಆಟದ ಮೇಲಿನ ಆಸಕ್ತಿ ಮತ್ತು ಪ್ರೀತಿ ಹೆಚ್ಚಾಗುತ್ತದೆ. ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಗಳ ಸಲುವಾಗಿ ಕಾಯಯವಂತೆ ಆಗಬೇಕು. ಮೊದಲೇ ಈ ದಿನ ಈ ಸಮಯದಲ್ಲಿ ಫಿಕ್ಸ್ ಪಂದ್ಯ ನಡೆಯಲಿದೆ ಎಂದು ಘೋಷಿಸಬಾರದು,” ಎಂದು ಡೇವಿಡ್ ಲಾಯ್ಡ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)