ನವದೆಹಲಿ: ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯದೇವತೆಯ ಪ್ರತಿಮೆಯ ಬದಲು ಕಣ್ಣು ತೆರೆದ ನ್ಯಾಯ ದೇವತೆಯ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಅನಾವರಣಗೊಳಿಸಲಾಗಿದೆ. ನ್ಯಾಯದೇವತೆ ಯಾರನ್ನೂ ಎಂದಿಗೂ ಬೇಧ ಭಾವ ಮಾಡದಂತೆ ಕಣ್ಣಿಗೆ ಪಟ್ಟಿ ಕಟ್ಟಲಾಗುತ್ತಿತ್ತು. ಇದಕ್ಕೆ ಕಾರಣ ಅಂದರೆ ಬಂದ ಆರೋಪಿಗಳಲ್ಲಿ ಬಡವ ಶ್ರೀಮಂತ ಎಂಬುದು ಕಾಣದಂತೆ ಎಂಬ ಅರ್ಥದಲ್ಲಿ ಇದನ್ನು ನಡೆಸಿಕೊಂಡು ಬರಲಾಗಿತ್ತು.
ಇದೀಗ ಸಿಜೆಐ ಆದೇಶದಂತೆ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ಸುಪ್ರೀಂ ಕೋರ್ಟ್ನಲ್ಲಿ ತೆರೆಯಲಾಗಿದೆ. ಇಷ್ಟೇ ಅಲ್ಲದೇ ನ್ಯಾಯದೇವತೆಯ ಕೈಯಲ್ಲಿದ್ದ ಖಡ್ಗದ ಬದಲು ಭಾರತದ ಸಂವಿಧಾನ ನೀಡಲು ಸಿಜೆಐ ಸೂಚಿಸಿದ್ದಾರೆ. ಆದೇಶದಂತೆ ಈಗಾಗಲೇ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಲಾಗಿದೆ.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರ್ತಾ ಇದ್ಯಾ..? ಹೀಗೆ ಮಾಡಿ ನಿವಾರಣೆಯಾಗುತ್ತೆ
ಭಾರತೀಯ ದಂಡ ಸಂಹಿತೆಯಂತಹ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಭಾರತೀಯ ನ್ಯಾಯ ಸಂಹಿತೆಯಾಗಿ ಬದಲಿಸುವ ಮೂಲಕ ಕಾನೂನು ವ್ಯವಸ್ಥೆಯಲ್ಲಿ ವಸಾಹತುಶಾಹಿ ಪರಂಪರೆಯನ್ನು ಈ ಹಿಂದೆ ಕೈಬಿಡಲಾಗಿತ್ತು.