ಬೆಂಗಳೂರು: ಮೂರು ಡಿಸಿಎಂ ವಿಚಾರವಾಗಿ ಯಾವುದೇ ಸಭೆಯನ್ನು ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೂರು ಡಿಸಿಎಂ ವಿಚಾರವಾಗಿ ಯಾವುದೇ ಸಭೆಯನ್ನು ಮಾಡಿಲ್ಲ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಿದಾಗ ಅಭಿಪ್ರಾಯ ಹೇಳಿದ್ದಾರೆ. ಮೂರು ಡಿಸಿಎಂ ಮಾಡಿದ್ರೆ ಒಳ್ಳೆಯದು ಎಂದು ಕೆಲವರ ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳಿದರು.
Swollen feet in Winter : ಚಳಿಗಾಲದಲ್ಲಿ ಊದಿಕೊಂಡ ಪಾದಗಳಿಗೆ ಈ ಮನೆ ಮದ್ದನ್ನು ಉಪಯೋಗಿಸಿ!
ಮೂರು ಡಿಸಿಎಂ ಮಾಡೋದು ಬಿಡೋದು ಹೈಕಮಾಂಡಿಗೆ ಬಿಟ್ಟಿದ್ದು ಎಲ್ಲಾ ಸಚಿವರು ದೆಹಲಿಗೆ ಬರುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ ಸಚಿವರಿಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ನೀಡಿದ್ದಾರೆ. ಕ್ಷೇತ್ರದ ಸ್ಥಿತಿಗತಿ ಮತ್ತು ಅಕಾಂಕ್ಷಿಗಳ ಬಗ್ಗೆ ಮಾಹಿತಿ ನೀಡುತ್ತೇವೆ
ಹಾಗೆ ಆದಷ್ಟು ಬೇಗ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ ಅಭ್ಯರ್ಥಿಗಳಿಂದ ಕೆಲಸ ಮಾಡಿಸಬಹುದು, ಕ್ಷೇತ್ರದಲ್ಲಿ ಸುತ್ತಾಡಿಸಬಹುದು ಎಂದು ನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.