ಚಾಮರಾಜನಗರ: ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆ ಕುರಿತು ಸಚಿವ ಕೆ. ವೆಂಕಟೇಶ್ ಅವರು ಮಾತನಾಡಿ ದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾಗಿ ಕೆಲಸ ಮಾಡಿ ಸಾರ್ವಜನಿಕ ಜೀವನದಲ್ಲಿ ಅವರದೇ ಆದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಒಂದಿನ ಈ ಪಾರ್ಟಿ ಒಂದಿನ ಆ ಪಾರ್ಟಿ ಎಂದರೆ ಏನು ಹೇಳಬೇಕು ಅವರಿಗೆ..?. ಅವರಿಗೆ ಗೌರವ ಕೊಡಲು ಎಂಎಲ್ಸಿಯನ್ನಾಗಿ ಪಕ್ಷ ಮಾಡಿತ್ತು. ಆಪರೇಷನ್ ಮಾಡುವವರು ಮಾಡುತ್ತಿರುತ್ತಾರೆ. ಆದರೆ ನಮ್ಮ ಪಕ್ಷದವರು ಯಾರೂ ಅಲ್ಲಿಗೆ ಹೋಗಲ್ಲ.
5 ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳಾದ ನಾವು ಪ್ರತಿಯೊಂದು ಸಾವಿಗೂ ಹೋಗುತ್ತೇವೆ, ಮದುವೆಗೂ ಹೋಗುತ್ತೇವೆ, ನಾಮಕರಣಕ್ಕೂ ಹೋಗುತ್ತೇವೆ. ಇವೆಲ್ಲಾ ವರ್ಕೌಟ್ ಆಗಲ್ಲ. ಪಬ್ಲಿಕ್ ಮೆಮೊರಿ ವೆರಿ ಶಾರ್ಟ್. ಬೇಗ ಮರೆಯುತ್ತಾರೆ. ಶ್ರೀರಾಮ ಮಂದಿರ ಉದ್ಘಾಟನೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವರು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.