ಹಿಂದೂ ಧರ್ಮದಲ್ಲಿ, ಪ್ರತಿ ವಾರದ ದಿನದ ವಿಶೇಷತೆಯನ್ನು ವಿವರಿಸುವುದರ ಜೊತೆಗೆ, ಅದನ್ನು ಯಾವ ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗಿದೆ ಎಂಬುದರ ಬಗ್ಗೆಯೂ ಹೇಳಲಾಗಿದೆ. ಸೋಮವಾರವನ್ನು ಶಿವನಿಗೆ ಹೇಗೆ ಅರ್ಪಿಸಲಾಗುತ್ತದೆಯೋ ಅದೇ ರೀತಿ ಮಂಗಳವಾರವನ್ನು ಹನುಮಂತನ ದಿನವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳಿರುವುದು ಸಾಮಾನ್ಯ ವಿಷಯ,
ಆದರೆ ಹಲವಾರು ಪರಿಹಾರಗಳ ನಂತರವೂ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಉದ್ವಿಗ್ನತೆ ಉಂಟಾಗುತ್ತದೆ. ಇನ್ನು ಮಂಗಳವಾರ ನಾವು ಮಾಡುವ ತಪ್ಪುಗಳು ನಮ್ಮ ಜೀವನದಲ್ಲಿನ ಕಷ್ಟವನ್ನ ಜಾಸ್ತಿ ಮಾಡುತ್ತದೆ. ಈ ದಿನ ದೇವರಿಗೆ ಪೂಜೆ ಸಲ್ಲಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗಾದ್ರೆ ಹನುಮಂತನ ಕೋಪದಿಂದ ತಪ್ಪಿಸಿಕೊಳ್ಳಲು ಮತ್ತು ಮಂಗಳ ಗ್ರಹದ ದುಷ್ಪರಿಣಾಮಗಳನ್ನು ತಪ್ಪಿಸಲು ಈ ದಿನ ಯಾವ ತಪ್ಪುಗಳನ್ನ ಮಾಡಬಾರದು ಎಂಬುದು ಇಲ್ಲಿದೆ.
ಸಾಲ ಪಡೆಯಬೇಡಿ:
ಆರ್ಥಿಕ ಸಮೃದ್ಧಿಗಾಗಿ, ಯಾವುದೇ ರೀತಿಯ ಸಾಲದ ವಹಿವಾಟುಗಳನ್ನು ಮಂಗಳವಾರದಂದು ತಪ್ಪಿಸುವುದು ಅವಶ್ಯಕ. ಈ ದಿನ ನೀವು ಯಾವುದೇ ವ್ಯಕ್ತಿಗೆ ಸಾಲ ನೀಡಬೇಡಿ ಅಥವಾ ಯಾರಿಂದಲೂ ಸಾಲ ಪಡೆಯಬೇಡಿ.
ಉದ್ದಿನ ಬೇಳೆ:
ಮಂಗಳವಾರ ಯಾವುದೇ ಕಾರಣಕ್ಕೂ ಉದ್ದಿನ ಬೇಳೆಯನ್ನ ಮನೆಗೆ ತರಬಾರದು. ಜ್ಯೋತಿಷ್ಯದ ಪ್ರಕಾರ ಉದ್ದಿನ ಬೇಳೆ ಶನಿ ಗ್ರಹಕ್ಕೆ ಸಂಬಂಧಪಟ್ಟಿದ್ದಾಗಿದೆ. ಶನಿ ಹಾಗೂ ಮಂಗಳ ಗ್ರಹದ ನಡುವೆ ಉತ್ತಮವಾದ ಸಂಬಂಧವಿಲ್ಲ. ಮಂಗಳವಾರ ಉದ್ದಿನ ಬೆಳೆ ತಂದರೆ ಅದರಿಂದ ಕುಟುಂಬದಲ್ಲಿ ಜಗಳ ಆಗುತ್ತದೆ. ಇದು ನಿಮ್ಮ ಮನೆಯ ಶಾಂತಿಯನ್ನ ಹಾಳು ಮಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಂಗಳವಾರ ಉದ್ದಿನ ಬೇಳೆಯನ್ನ ಮನೆಗೆ ತರಬೇಡಿ.
ಈ ದಿಕ್ಕಿನತ್ತ ಪ್ರಯಾಣ ಮಾಡಬೇಡಿ:
ಮಂಗಳವಾರವು ಸಂಕಟ ಮೋಚನ ಹನುಮಂತನ ದಿನವಾಗಿದೆ. ಈ ದಿನ ನೀವು ಯಾವುದೇ ಕೆಲಸವನ್ನು ಮಾಡಲು ಹೊರಟರೆ ಮೊದಲು ಹನುಮಂತನ ನಾಮ ಸ್ಮರಣೆಯನ್ನು ಮಾಡಿ ನಂತರ ಕೆಲಸವನ್ನು ಆರಂಭಿಸಬೇಕು. ಆದರೆ ಅಗತ್ಯವಿಲ್ಲದಿದ್ದರೆ, ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ತೀರಾ ಅವಶ್ಯವಿದ್ದಲ್ಲಿ ಬೆಲ್ಲವನ್ನು ತಿಂದು ನಂತರ ಈ ದಿಕ್ಕಿನಲ್ಲಿ ಪ್ರಯಾಣವನ್ನು ಆರಂಭಿಸಬಹುದು.
ಮಂಗಳವಾರ ಶೇವ್ ಮಾಡಬಾರದು:
ಯಾವುದೇ ಕಾರಣಕ್ಕೂ ಮಂಗಳವಾರ ಶೇವ್ ಮಾಡಬಾರದು. ಮಂಗಳ ಗ್ರಹವು ಶಾಖದೊಂದಿಗೆ ಸಂಪರ್ಕ ಹೊಂದಿದೆ ಎನ್ನಲಾಗುತ್ತದೆ. ಈ ದಿನವು ದೇಹದ ಕಾರ್ಯಗಳು ಮತ್ತು ರಕ್ತದಂತಹ ಸಂಬಂಧಿತ ಪದಾರ್ಥಗಳ ಮೇಲೆ ಪ್ರಭಾವ ಬೀರುವ ಮತ್ತು ಕ್ರೋಧವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಶೇವಿಂಗ್ ಮಾಡುವುದರಿಂದ ನಿಮಗೆ ಸಮಸ್ಯೆಗಳಾಗಬಹುದು. ಇದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಸಹ ಬರಬಹುದು.
ಈ ಬಣ್ಣದ ಬಟ್ಟೆಯನ್ನು ಧರಿಸಬಾರದು:
ಹನುಮಂತನಿಗೆ ಕೆಂಪು ಬಣ್ಣ ತುಂಬಾ ಪ್ರಿಯವೆಂದು ಪರಿಗಣಿಸಲಾಗುವುದು. ಆದ್ದರಿಂದ, ಈ ದಿನ ಶನಿದೇವನಿಗೆ ಪ್ರಿಯವಾದ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಹನುಮಂತನ ಆಶೀರ್ವಾದವನ್ನು ಪಡೆಯುವುದಿಲ್ಲ. ಮಂಗಳವಾರದಂದು ಜನರು ಕಪ್ಪು ಬಟ್ಟೆಗಳನ್ನು ಧರಿಸಬಾರದು.
ಇವುಗಳನ್ನು ಸೇವಿಸಬಾರದು:
ಮಂಗಳವಾರದಂದು ಹನುಮಂತನನ್ನು ಪೂಜಿಸಿದ ನಂತರ, ಆ ಕುಟುಂಬದ ಯಾವುದೇ ಸದಸ್ಯರು ಮೊಟ್ಟೆ, ಮಾಂಸ, ಮೀನು, ಮದ್ಯ ಸೇವಿಸಬಾರದು. ಈ ದಿನ ಅವರು ಸಾತ್ವಿಕ ಜೀವನ ನಡೆಸಬೇಕು. ಉಪ್ಪನ್ನು ಕೂಡ ಮಂಗಳವಾರದಂದು ಬಳಸಬಾರದು.