ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಆತನ ಬಗ್ಗೆ ಮೆಚ್ಚುಗೆ ಮಾತುಗಳೇ ಕೇಳಿ ಬರ್ತಿದೆ.ತಮ್ಮ ನೇರಾ ನೇರಾ ನುಡಿಯ ಮೂಲಕ ಹನುಮಂತ ಪ್ರತಿಯೊಬ್ಬರಿಗೂ ಇಷ್ಟವಾಗಿದ್ದಾನೆ. ಹನುಮಂತನನ್ನು ಸದಾ ಹೊಗಳುತ್ತಿದ್ದ ಸುದೀಪ್ ಈ ವಾರ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಹನುಮಂತ ಅವರು ಸೈಲೆಂಟ್ ಆಗಿ ತಲೆ ಆಡಿಸಿದ್ದಾರೆ.
ಬಿಗ್ ಬಾಸ್ ಪ್ರತಿ ವಾರ ಕಷ್ಟ ಪಟ್ಟು ಟಾಸ್ಕ್ಗಳ ರಚನೆ ಮಾಡಿ ಅದನ್ನು ನೀಡುತ್ತಾರೆ. ಇದನ್ನು ಸ್ಪರ್ಧಿಗಳು ಆಡಬೇಕು. ಆದರೆ, ಅವರು ಮಾಡುವ ಎಡವಟ್ಟಿನಿಂದ ಕೆಲವೊಮ್ಮೆ ಟಾಸ್ಕ್ ರದ್ದಾದ ಉದಾಹರಣೆ ಇದೆ. ಈ ವಾರವೂ ಹಾಗೆಯೇ ಆಗಿದೆ. ದೊಡ್ಮನೆಯಲ್ಲಿ ಫಲಿತಾಂಶ ಘೋಷಿಸಲು ಸ್ಪರ್ಧಿಗಳು ಒಪ್ಪದ ಕಾರಣ ಟಾಸ್ಕ್ ರದ್ದಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅವರು ಈ ಬಗ್ಗೆ ಕ್ಲಾಸ್ ತೆಗೆದುಕೊಳ್ಳುವಾಗ ಕಠಿಣ ಎಚ್ಚರಿಕೆ ನೀಡಿದ್ದಾರೆ.
‘ಸರಿಯಾಗಿ ಟಾಸ್ಕ್ ಆಡಿ. ಕೆಲವೊಮ್ಮೆ ಉಸ್ತುವಾರಿಗಳಾಗಿ ನೀವು ನಡೆದುಕೊಳ್ಳೊದು ಸರಿ ಇರಲ್ಲ. ಅದನ್ನು ಸರಿ ಮಾಡಿಕೊಳ್ಳಿ. ಚೈತ್ರಾ ಅವರು ನಡೆಸಿಕೊಟ್ಟ ಉಸ್ತುವಾರಿ ನನಗೆ ಹೇಸಿಗೆ ತಂದಿತ್ತು. ಮಾತಾಡಿದ್ರೆ ಫೌಲ್ ಎನ್ನುತ್ತಾರೆ. ನಿಮ್ಮದೇ ರೂಲ್ಸ್ ಮಾಡಿಕೊಂಡಿದ್ರಿ’ ಎಂದರು ಸುದೀಪ್. ಆ ಬಳಿಕ ಹನುಮಂತ ಅವರ ವಿಚಾರಕ್ಕೆ ಬಂದರು.
ಹನುಮಂತ ಮಾತು ಎತ್ತಿದರೆ, ‘ಟಾಸ್ಕ್ ರದ್ದಾದರೂ ತೊಂದರೆ ಇಲ್ಲ’ ಎನ್ನುತ್ತಿದ್ದರು. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹನುಮಂತು ಅವರೇ ನಿಮ್ಮ ಬಾಯಿಂದ ಈ ಟಾಸ್ಕ್ ರದ್ದಾದ್ರೂ ತೊಂದರೆ ಇಲ್ಲ ಎಂಬ ಮಾತು ಬಂದ್ರೆ… ಎಷ್ಟೇ ವೋಟ್ ಬಿದ್ರು ನಿಮ್ಮನ್ನು ಹೊರಗೆ ಕಳಿಸೋ ಜವಾಬ್ದಾರಿ ನನ್ನದು. ಈ ರೀತಿ ಗಾಂಚಲಿ ಮಾತುಗಳು ಯಾರಿಂದಲೂ ಬೇಡಮ್ಮ. ಇದು ಯಾರಪ್ಪನ ಆಸ್ತೀನು ಅಲ್ಲಮ್ಮ. ರದ್ದಾಗೇಬೇಕೋ ಅಥವಾ ಬೇಡವೋ ಎಂಬುದನ್ನು ಬಿಗ್ ಬಾಸ್ ಹೇಳ್ತಾರೆ’ ಎಂದರು ಸುದೀಪ್.
ಈ ಮಾತಿಗೆ ಹನುಮಂತ ಅವರು ಸೈಲೆಂಟ್ ಆದರು. ಅವರಿಗೆ ಏನು ಹೇಳಬೇಕು ಎಂಬುದು ಗೊತ್ತಾಗದೆ ಸೈಲೆಂಟ್ ಆದರು. ಸುಮ್ಮನೆ ತಲೆ ಆಡಿಸಿದರು.