ಬೆಂಗಳೂರು:- ಕೈ-ಕಮಲ ನಾಯಕರ ನಡುವೆ ರಾಮಮಂದಿರ ರಾಜಕೀಯ ಮುಂದುವರಿದಿದ್ದು, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡದಿರುವುದು ಕೈ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಅದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸಚಿವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸ್ತಿದ್ದಾರೆ.. ರಾಮ ಯಾರೊಬ್ಬರ ಜಹಗೀರ್ ಅಲ್ಲ.. ಖಾಸಗಿ ಆಸ್ತಿನೂ ಅಲ್ಲ ಅಂತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.. ಭಾರತ್ ಮಾತಾಕಿ ಜೈ ಎಂದು ಅತ್ಯಾಚಾರ ಕೊಲೆ ಮಾಡಿದ್ರೆ, ಅದನ್ನ ಒಪ್ಪಿಕೊಳ್ಳೋದಕ್ಕೆ ಆಗುತ್ತಾ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ..
ಇನ್ನು ರಾಮ ಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕಾರಣ.. ಅವರನ್ನೇ ಬರಬೇಡಿ ಎಂದಿದ್ದಾರೆ.. ಇನ್ನು ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಕೊಡ್ತಾರಾ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಿಡಿ ಕಾರಿದ್ರು.. ರಾಮ ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ಕೊಟ್ಟಿದ್ದೇನೆ.. ಆಗ ಅವರಿಗೆ ಎಲ್ಲಾರು ನೆನಪು ಆದ್ರು.. ಈಗಿಲ್ಲ ಎಂದ್ರು..
ನಾನೇ ದೇವಸ್ಥಾನ ಕಟ್ಟಿದೆ ಅನ್ನಇರಬಾರೋ ಅಂತಾ ಆರ್ ಬಿ ತಿಮ್ಮಾಪುರ್ ಆಕ್ರೋಶ ಹೊರಹಾಕಿದ್ರೆ, ಚುನಾವಣೆ ಬಂದಾಗ ಬಿಜೆಪಿಯವರು ಧರ್ಮದ ವಿಚಾರವನ್ನ ಕೈಗೆತ್ತಿಕೊಳ್ತಾರೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ರು..