ರಾಯಚೂರು: ಬಿಜೆಪಿಯವರಿಗೆ ಜನರತ್ರ ಹೋಗ್ಲಿಕ್ಕೆ ಮಕ್ಕ ಇಲ್ಲ ಹಾಗಾಗಿ ಒಬ್ಬರೊಬ್ಬರು ನಾಯಕನ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಕಟ್ಟಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರುವ ವಿಚಾರ, ರಾಯಚೂರಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಶರಣು ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಅವರನ್ನು ಎಂಎಲ್ಸಿ ಮಾಡಿದ್ದೇವೆ, ಕಾಂಗ್ರೆಸ್ ನಲ್ಲಿ ಸೋತವರಿಗೆ ಎಂಎಲ್ಸಿ ಮಾಡಿರುವ ಉದಾಹರಣೆಗಳು ಇಲ್ಲ.
ಅವರು ನಮ್ಮ ಪಕ್ಷಕ್ಕೆ ಬಂದಿದ್ದರು ಗೌರವ ಕೊಟ್ಟಿದ್ದಿವಿ,ಪಕ್ಷ ಬಿಟ್ಟು ಹೋಗ್ತಿದ್ದಾರೆ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದರು. ಪ್ರಜಾಪ್ರಭುತ್ವವಾಗಿದೆ ಯಾರು ಯಾವ ಪಕ್ಷದಲ್ಲಿ ಆದರೂ ಹೋಗುವುದು,ವ್ಯಕ್ತಿಗಳಿಂದ ಪಕ್ಷ ಬೆಳೆಯುವುದಿಲ್ಲ, ಪಕ್ಷದಿಂದ ವ್ಯಕ್ತಿಗಳು ಬೆಳೆಯುತ್ತಾರೆ. ಬಿಜೆಪಿ ಅವರಿಗೆ ರಾಜ್ಯದ ಜನ ಮೂಲೆಗುಂಪು ಮಾಡಿದ್ದಾರೆ,
ಸಾಮಾನ್ಯ ಜನರು ವೋಟ್ ಹಾಕಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಕೊಟ್ಟಿದ್ದಾರೆ. ಹಿಂದಿನ ಸರಕಾರದ ಭ್ರಷ್ಟಾಚಾರ, ಹಗರಣಗಳುಗೆ, ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ನೀಡಿದ್ದಾರೆ. ಬಿಜೆಪಿಯವರಿಗೆ ಜನರತ್ರ ಹೋಗ್ಲಿಕ್ಕೆ ಮಕ್ಕ ಇಲ್ಲ ಹಾಗಾಗಿ ಒಬ್ಬರೊಬ್ಬರು ನಾಯಕನ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಕಟ್ಟಲು ಹೊರಟಿದ್ದಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.