ಮಂಗಳೂರು: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದ ವಿಚಾರದಲ್ಲೂ ತಾರತಮ್ಯ ಧೋರಣೆ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಬುದ್ಧಿವಂತ ಮತದಾರರ ಜೊತೆಗೆ ಗೊಂದಲ ಸೃಷ್ಟಿಸಲು ತೆರಿಗೆ ಪಾಲು ನೀಡುತ್ತಿಲ್ಲ ಎಂದು ಹೇಳಿಕೊಂಡು ಬರುತ್ತಿದೆ. ನಾವು ಕರ್ನಾಟಕ ಬಿಡಿ, ಯಾವುದೇ ರಾಜ್ಯದ ವಿಚಾರದಲ್ಲೂ ತಾರತಮ್ಯ ಧೋರಣೆ ಮಾಡಿಲ್ಲ.
ಈ ಹಿಂದೆ ಯುಪಿಎ ಸರ್ಕಾರ ನೀಡುತ್ತಿದ್ದ ಪಾಲು ಈಗ ಬಿಜೆಪಿ ಸರ್ಕಾರ ನೀಡುತ್ತಿರುವ ಪಾಲನ್ನು ತುಲನೆ ಮಾಡಿ ಹೇಳಲಿ. 2014ರಿಂದ 2024ರವರೆಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ನೀಡಿದ ಪಾಲು ಮೊದಲಿಗಿಂತ ಹೆಚ್ಚಿದೆ. ಎಲ್ಲ ರಾಜ್ಯಗಳಿಗೆ ಹೆಚ್ಚಾಗಿ ನೀಡಲಾಗಿದೆ. ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಹಣಕಾಸು ಸಮಿತಿ ಎಲ್ಲವನ್ನು ನಿರ್ಧಾರ ಮಾಡುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ’ಎಂದರು.
BPL ರೇಷನ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ.? ಇಲ್ಲಿದೆ ಮಾಹಿತಿ
ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲು ಅಲ್ಲಿನ ನೆರೆ ಸಮಸ್ಯೆಯೇ ಕಾರಣ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ. ನೇಪಾಳದ ಕೋಸಿ ನದಿಯಿಂದ ಬಿಹಾರ ರಾಜ್ಯ ಪ್ರತೀ ವರ್ಷವೂ ನೆರೆ ಸಂಕಷ್ಟಕ್ಕೆ ಗುರಿಯಾಗುತ್ತಿದೆ. ನೆರೆಯಿಂದಾಗಿ ಅಲ್ಲಿ ಸಾಕಷ್ಟು ಆಸ್ತಿ, ಪ್ರಾಣ ಹಾನಿಗಳು ಉಂಟಾಗುತ್ತಿರುತ್ತದೆ. ಇದಕ್ಕೆ ಪೂರ್ಣ ಪ್ರಮಾಣದ ಪರಿಹಾರ ನೀಡುವ ನಿಟ್ಟಿನಲ್ಲಿ ಭಾರತ ಹಾಗೂ ನೇಪಾಳದ ಜೊತೆಗೆ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದರು.